ಬಂಟ್ವಾಳ:ಕಳೆದ 6 ತಿಂಗಳ ಹಿಂದೆ ಖರೀದಿಸಿದ್ದ ರೂ 10ಲಕ್ಷ ವೆಚ್ಚದ ಸಿಸಿ ಕ್ಯಾಮೆರಾ ಖರೀದಿಯಲ್ಲಿ ಭಾರೀ ಅವ್ಯವಹಾರವಾಗಿದ್ದು, ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ವಿರೋಧ ಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯಸಭೆಯಲ್ಲಿ ಇದು ಭಾರೀ ಗದ್ದಲ ಮತ್ತು ಪರಸ್ಪರ ವಾಕ್ಸಮರಕ್ಕೆ ಕಾರಣವಾಯಿತು. ವಿರೋಧ ಪಕ್ಷ ನಾಯಕ ಎ.ಗೋವಿಂದ ಪ್ರಭು ವಿಷಯ ಪ್ರಸ್ತಾಪಿಸಿ ಮಾತನಾಡಿ, ' ಪುರಸಭೆ ಮತ್ತು ಬೀದಿ ಬದಿ ಅಳವಡಿಸಿದ್ದ ರೂ 10 ಲಕ್ಷ ವೆಚ್ಚದ ಸಿಸಿ ಕ್ಯಾಮೆರಾ ಕಾರ್ಯ ನಿರ್ವಹಿಸದೆ ಬಿಡಿ ಭಾಗಗಳೂ ಕಳವಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಗುತ್ತಿಗೆದಾರರನ್ನು ಕರೆಸಿ ಅವರಿಂದ ಹಣ ವಸೂಲಿ ನಡೆಸಿ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಈಗಾಗಲೇ ಪ್ರತೀ ಸಾಮಾನ್ಯ ಸಭೆಯಲ್ಲಿ ಚಚರ್ೆ ನಡೆಯುತ್ತಿದ್ದರೂ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ಹಾರಿಕೆ ಉತ್ತರ ನೀಡುತ್ತಿದ್ದು, ಇದರಿಂದ ಯಾರ್ಯಾರಿಗೆ ಎಷ್ಟೆಷ್ಟು ಸಂದಾಯವಾಗಿದೆ ಎಂಬ ಸಂಶಯ ಮೂಡಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಇದೇ ವೇಳೆ ಬಿಜೆಪಿ ಸದಸ್ಯ ಹರಿಪ್ರಸಾದ್ ಮತ್ತು ಎಸ್ ಡಿಪಿಐ
ಸದಸ್ಯ ಮುನೀಶ್ ಆಲಿ ಪುರಸಭಾಧ್ಯಕ್ಷರೊಂದಿಗೆ ಮಾತಿನ ಚಕಮಕಿ ನಡೆಸಿದರು. ಇನ್ನೊಂದೆಡೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಅವರು ಗುತ್ತಿಗೆದಾರ ವಿರುದ್ಧ 'ಅಸಂವಿಧಾನಿಕ ಶಬ್ಧ' ಬಳಕೆ ಮಾಡಿರುವ ಬಗ್ಗೆ ಸದಸ್ಯ ಮುನೀಶ್ ಆಲಿ ಖಂಡಿಸಿದರು. ಈ ನಡುವೆ ಆಡಳಿತ ಪಕ್ಷ (ಕಾಂಗ್ರೆಸ್) ಸದಸ್ಯರಾದ ಪಿ.ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಗಂಗಾಧರ ಪೂಜಾರಿ ಮತ್ತಿತರರು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಇದೀಗ ಪ್ರತಿಭಟನೆ ಕೈಬಿಡಿ. ಮುಂದಿನ ಒಂದು ತಿಂಗಳೊಳಗೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ನಿಮ್ಮೊಂದಿಗೆ ನಾವೂ ಕೈ ಜೋಡಿಸಲು ಸಿದ್ಧ ಎಂದು ಮನವೊಲಿಸಲು ಯತ್ನಿಸಿದರು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಸ್ವತಃ ಬಂದು ಪ್ರತಿಭಟನಾಕಾರರಲ್ಲಿ ಕ್ಷಮೆಯಾಚಿಸಿದರೂ ಬಗ್ಗಲಿಲ್ಲ. ಇದರಿಂದ ಸಭೆಯನ್ನು ಮಂಗಳವಾರಕ್ಕೆ ಮುಂದೂಡಿರುವುದಾಗಿ ಪುರಸಭಾಧ್ಯಕ್ಷರು ಪ್ರಕಟಿಸಿದರು. ಸದಸ್ಯರಾದ ಮಹಮ್ಮದ್ ನಂದರಬೆಟ್ಟು, ಜನಾರ್ದನ ಚೆಂಡ್ತಿಮಾರ್, ಲುಕ್ಮಾನ್ ಕೈಕಂಬ, ಸಿದ್ದಿಕ್, ಇದ್ರಿಸ್, ಝೀನತ್ ಮತ್ತಿತರರು ಚಚರ್ೆಯಲ್ಲಿ ಪಾಲ್ಗೊಂಡರು.
ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಶೋಭಲಕ್ಷ್ಮಿ, ಕಂದಾಯ ಅಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಅಧಿಕಾರಿ ಲೀಲಾವತಿ, ಉಮಾವತಿ ಮತ್ತಿತರರು ಇದ್ದರು.













