ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜು ಹಾಗೂ ಕರುನಾಡು ಟೆಕ್ನಾಲಜೀಸ್ ಪ್ರೈ.ಲಿ ನಡುವೆ ಶೈಕ್ಷಣಿಕ ಒಪ್ಪಂದ.

Coastal Bulletin
ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜು ಹಾಗೂ ಕರುನಾಡು ಟೆಕ್ನಾಲಜೀಸ್ ಪ್ರೈ.ಲಿ ನಡುವೆ ಶೈಕ್ಷಣಿಕ ಒಪ್ಪಂದ.

ಬಂಟ್ವಾಳ :ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಇನ್ನರೇಶನ್ ಸೈನ್ಸ್ ವಿಭಾಗವು ಕರುನಾಡು ಟೆಕ್ನಾಲಜೀಸ್ ಪ್ರೈ.ಲಿ ಬೆಂಗಳೂರು ಇದರ ನಡುವೆ ಶೈಕ್ಷಣಿಕ ಒಪ್ಪಂದಕ್ಕೆ ಇತ್ತೀಚಿಗೆ ಸಹಿ ಮಾಡಲಾಗಿದೆ.

ಶೈಕ್ಷಣಿಕ ಮತ್ತು ಕೈಗಾರಿಕೆಗೆ ಸಂಬಂಧಿಸಿದಂತೆ ಸಹಭಾಗಿತ್ವವನ್ನು ವೃದ್ಧಿಸಲು ಈ ಒಪ್ಪಂದ ಸಹಕಾರಿಯಾಗಲಿದೆ. ಈ ಒಪ್ಪಂದದಂತೆ ಬೋಧಕರ ಪರಿಣತಿ, ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿ ಕೈಗಾರಿಕೆಗೆ ಸಂಬಂಧಿಸಿದಂತೆ ಪಠ್ಯವಸ್ತು ರೂಪಿಸುವುದು, ಜಂಟಿ

ಸಂಶೋಧನಾ ಚಟುವಟಿಕೆಗಳು, ಜ್ಞಾನ ವಿನಿಮಯ, ಇಂಟರ್ ಶಿಪ್, ಉದ್ಯಮಶೀಲತಾ ಚಟುವಟಿಕೆಗಳು, ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಸಮಕಾಲೀನ ತಂತ್ರಜ್ಞಾನದ ಪ್ರಾಯೋಗಿಕ ಅನ್ವಯ, ತ್ವರಿತವಾಗಿ ಬದಲಾಗುತ್ತಿರುವ ತಾಂತ್ರಿಕ ಅಗತ್ಯಗಳಿಗೆ ಸ್ಪಂದಿಸುವ ವೇದಿಕೆ ಇದಾಗಲಿದೆ.

Leave a Comment