ಫರಂಗಿಪೇಟೆ :ಡಿ. 22ರಂದು ಸೇವಾಂಜಲಿಯಲ್ಲಿ "ವರ್ಣಾoಜಲಿ" ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ.

Coastal Bulletin
ಫರಂಗಿಪೇಟೆ :ಡಿ. 22ರಂದು ಸೇವಾಂಜಲಿಯಲ್ಲಿ "ವರ್ಣಾoಜಲಿ" ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ.

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಏರ್ಯ ಆಳ್ವ ಪೌಂಡೇಶನ್, ಮೊಡಂಕಾಪು ಇವರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವರವರ ಸ್ಮರಣಾರ್ಥ "ವರ್ಣಾoಜಲಿ" 2ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಡಿ.22ರಂದು ಆದಿತ್ಯವಾರ ಬೆಳಿಗ್ಗೆ 9.30ಯಿಂದ ಸೇವಾಂಜಲಿ ಸಭಾಗೃಹ ಫರಂಗಿಪೇಟೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಸರೋಜಿನಿ ಎಸ್. ಶೆಟ್ಟಿ, ಮಂಗಳೂರು ರಂಗಭೂಮಿ, ಚಲನಚಿತ್ರ ಕಲಾವಿದರು, ಮಾಡಲಿದ್ದು ಅಧ್ಯಕ್ಷತೆಯನ್ನು ಮಹಾಬಲೇಶ್ವರ ಹೆಬ್ಬಾರ್ ನಿವೃತ್ತ ಮುಖ್ಯೋಪಾಧ್ಯಾಯರು, ಮೊಡಂಕಾಪು ಇವರು ವಹಿಸಲಿದ್ದಾರೆ. ಮದ್ಯಾಹ್ನ 2-30 ಗಂಟೆಗೆ ಬಹುಮಾನ ವಿತರಣ ಕಾರ್ಯಕ್ರಮ ನಡೆಯಲಿದೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪರ್ಧಾ ವಿವರ:

4ನೇ ತರಗತಿವರೆಗೆ

ವಿಷಯ : ಐಚ್ಚಿಕ (ಮಕ್ಕಳ ಆಯ್ಕೆ) ಬಹುಮಾನಗಳು :ಪ್ರಥಮ : ರೂ. 1000/- ನಗದು ಮತ್ತು ಪ್ರಶಸ್ತಿ,ದ್ವಿತೀಯ : ರೂ. 750/- ನಗದು ಮತ್ತು ಪ್ರಶಸ್ತಿ, ತೃತೀಯ : ರೂ. 500/- ನಗದು ಮತ್ತು ಪ್ರಶಸ್ತಿ

5ರಿಂದ 7ನೇ ತರಗತಿ

ವಿಷಯ : ನಮ್ಮೂರ ಹಬ್ಬಗಳು

ಬಹುಮಾನಗಳು :ಪ್ರಥಮ : ರೂ. 1500/- ನಗದುಮತ್ತು ಪ್ರಶಸ್ತಿ ದ್ವಿತೀಯ : ರೂ. 1000/- ನಗದು ಮತ್ತು

ಪ್ರಶಸ್ತಿ ತೃತೀಯ : ರೂ. 500/- ನಗದು ಮತ್ತು ಪ್ರಶಸ್ತಿ

8ರಿಂದ 10ನೇ ತರಗತಿ

ವಿಷಯ : ತುಳುನಾಡ ಸಂಸ್ಕೃತಿ ಹಾಗೂ ಕಲಾವೈಭವ ಬಹುಮಾನಗಳು :ಪ್ರಥಮ : ರೂ. 2000/- ನಗದು ಮತ್ತು ಪ್ರಶಸ್ತಿ,ದ್ವಿತೀಯ : ರೂ. 1500/- ನಗದು ಮತ್ತು ಪ್ರಶಸ್ತಿ,ತೃತೀಯ : ರೂ. 1000/- ನಗದು ಮತ್ತು ಪ್ರಶಸ್ತಿ

ಪ್ರತೀ ವಿಭಾಗದಲ್ಲಿ 2 ಸಮಾಧಾನಕರ ಬಹುಮಾನವಿದೆ. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು.

ಸೂಚನೆ : ಭಾಗವಹಿಸುವ ವಿದ್ಯಾರ್ಥಿಗಳು ಬೆಳಿಗ್ಗೆ ಗಂಟೆ 9-00ಕ್ಕೆ ಸರಿಯಾಗಿ ಹಾಜರಿರಬೇಕು + ಶಾಲಾ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು (ಐಡಿ ಕಾರ್ಡ್) + ಡ್ರಾಯಿಂಗ್ ಪೇಪರ್ ಹೊರತುಪಡಿಸಿ, ಇತರ ಪರಿಕರಗಳನ್ನು ಮಕ್ಕಳೇ ತರಬೇಕು. ಸ್ಪರ್ಧಾ ಸಮಯ : 2 ಗಂಟೆಗಳು,ಸ್ಪರ್ಧಾಳುಗಳಿಗೆ ಉಪಾಹಾರ ಮತ್ತು ಭೋಜನದ ವ್ಯವಸ್ಥೆ ಇದೆ

Leave a Comment