ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ತುಂಬೆ ಇದರ ಆಶ್ರಯದಲ್ಲಿ ಸಂಘದ ಸದಸ್ಯರಿಗೆ ನಡೆಯುವ 2ನೇ ಆವೃತ್ತಿಯ ಆಶೀರ್ವಾದ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಡಿ 15ರಂದು ಆದಿತ್ಯವಾರ ತುಂಬೆ ಬೊಳ್ಳಾರಿಯಲ್ಲಿ ನಡೆಯಿತು.
ಪಂದ್ಯಾಟವನ್ನು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ, ನೋಟರಿ ವಕೀಲ ಅರುಣ್ ರೋಶನ್ ಡಿಸೋಜಾ ಉದ್ಘಾಟಿಸಿದರು, ಬಳಿಕ ಮಾತನಾಡಿ, ಬಾಲ್ಯದ ದಿನಗಳಲ್ಲಿ ತಾನು ಕೂಡ ಆಶೀರ್ವಾದ್ ಸೇವಾ ಸಂಘದ ಒಬ್ಬ ಸದಸ್ಯನಾಗಿ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ ದಿನಗಳನ್ನು ನೆನೆದರು. ಅಲ್ಲದೆ ಸಂಘದ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು.
ಮುಖ್ಯ ಅಥಿಗಳಾಗಿ ಜಗದೀಶ್ ಪೂಜಾರಿ ಕಡೆಗೊಳಿ ಹಾಗು ಜಿ.ಮ್ ಸ್ಪೋರ್ಟ್ಸ್ ಶಾಪ್ ಮಾಲಕ ಕಿರಣ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರಿಕೆಟ್ ಪಂದ್ಯಾಟದಲ್ಲಿ ಆಶೀರ್ವಾದ್ ಬುಲ್ಸ್, ಆಶೀರ್ವಾದ್ ವಾರಿಯರ್ಸ್, ಆಶೀರ್ವಾದ್ ಟೈಟಾನ್ಸ್, ಆಶೀರ್ವಾದ್ ಗ್ಲಾಡಿಯೇಟರ್, ಆಶೀರ್ವಾದ್ ಡೇರ್ ಡೆವಿಲ್ಸ್ 5 ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು, ಕೊನೆಗೆ ಆಶೀರ್ವಾದ್ ಗ್ಲಾಡಿಯೇಟರ್ ತುಂಬೆ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಆಶೀರ್ವಾದ್ ಡೇರ್ ಡೆವಿಲ್ಸ್ ತಂಡ ರನ್ನರ್ ಆಗಿ ಆಯ್ಕೆಯಾಯಿತು. ಪಂದ್ಯ ಶ್ರೇಷ್ಠ
ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ತೇಜಸ್ ಕೊಟ್ಟಿಂಜ ಪಾಲಾದರೆ, ಬೆಸ್ಟ್ ಬ್ಯಾಟ್ಸ್ ಮನ್ ದೀಪಕ್ ಬೊಳ್ಳಾರಿ, ಬೆಸ್ಟ್ ಬೌಲರ್ ಪ್ರಶಸ್ತಿಗೆ ವಿನೋದ್ ಬೊಳ್ಳಾರಿ ಆಯ್ಕೆಯಾದರು. ಆಶೀರ್ವಾದ್ ಪ್ರೀಮಿಯರ್ ಲೀಗ್ ಪಂದ್ಯಕ್ಕೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ 5 ತಂಡದ ಮಾಲಕರಾದ ಸಂಘದ ಸದಸ್ಯರಿಗೆ ಹಾಗು ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಾದ್ ಸಂಘದ ಗೌರವಾಧ್ಯಕ್ಷ ಗಣೇಶ್ ಸುವರ್ಣ, ಮಹಿಳಾ ಸಂಘದ ಅಧ್ಯಕ್ಷೆ ಜಲಜಾಕ್ಷಿ ವಿಜಯ್ ಕೋಟ್ಯಾನ್, ಗ್ರಾಮ ಪಂಚಾಯತ್ ಸದಸ್ಯೆ ಹೇಮಲತಾ ಪೂಜಾರಿ, ಅಧ್ಯಕ್ಷ ಚೆನ್ನಕೇಶವ, ಕಾರ್ಯದರ್ಶಿ ಪ್ರವೇಶ್, ಸಂಘದ ಹಿರಿಯ ಗೌರವ ಸಲಹೆಗಾರರಾದ ಐತಪ್ಪ ಕುಲಾಲ್, ದೇವಪ್ಪ ಗೌಡ, ನಾರಾಯಣ್ ಕಿರೋಡಿಯನ್, ಕೃಷ್ಣಪ್ಪ ಪೂಜಾರಿ, ಆನಂದ ಕುಲಾಲ್, ಭವಾನಿ ಶಂಕರ್, ಸಂದೀಪ್ ಕುಲಾಲ್, ಸುಧಾಕರ ಕೊಟ್ಟಿಂಜ, ಅನಂತ ವಿಜಯ ತುಂಬೆ, ಚಂದ್ರ ತುಂಬೆ ಮತ್ತಿತರರು ಉಪಸ್ಥಿತರಿದ್ದರು.















