ಬಂಟ್ವಾಳ ತಾಲ್ಲೂಕಿನ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಬಿ.ಸಿ.ರೋಡಿನ ಮಿನಿವಿಧಾನಸೌಧ ಎದುರು ಗುರುವಾರ ಪ್ರತಿಭಟನೆ ನಡೆಸಿ ಮೈಸೂರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಸಮಾಜದ ಆಸ್ತಿಕರ ತಾಣವಾಗಿರುವ ಪುರಾತನ ದೇವಸ್ಥಾನವನ್ನು ಹೊತ್ತು ಗೊತ್ತು ಇಲ್ಲದ ವೇಳೆ ತುಘಲಕ್ ದರ್ಬಾರ್ ನಂತೆ ಅಕ್ರಮವಾಗಿ ತೆರವುಗೊಳಿಸಿದ ಮೈಸೂರು ಜಿಲ್ಲಾಡಳಿತದ ಕ್ರಮ ಖಂಡನೀಯವಾಗಿದೆ ಎಂದು ಇಲ್ಲಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ ಹೇಳಿದ್ದಾರೆ. ಇಲ್ಲಿನ ವಿಶ್ವಹಿಂದೂ ಪರಿಷದ್ ಮತ್ತು ಬಜರಂಗದಳ ವಿಟ್ಲ ಪ್ರಖಂಡ ವತಿಯಿಂದ ಗುರುವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಮಸ್ತ ಹಿಂದೂ ಸಮಾಜದ ಭಾವನೆಗೆ ಧಕ್ಕೆಯಾಗಿದ್ದು, ಕೇವಲ ಹಿಂದೂ ದೇವಾಲಯ ಮಾತ್ರ ತೆರವುಗೊಳಿಸುವ ಮೂಲಕ ಜಿಲ್ಲಾಡಳಿತ ತಾರತಮ್ಯ ತೋರಿದೆ ಎಂದು ಆರೋಪಿಸಿದರು.
ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಪ್ರಮುಖರಾದ ಪದ್ಮನಾಭ ಕಟ್ಟೆ, ಸುರೇಶ್ ಬೆಂಜನಪದವು, ಲೋಹಿತ್ ಪಣೋಲಿಬೈಲು, ಮಿಥುನ್ ಕಲ್ಲಡ್ಕ, ಶಿವಪ್ರಸಾದ್ ತುಂಬೆ, ಅಮಿತ್ ಕಲ್ಲಡ್ಕ, ಸಂತೋಷ್ ಸರಪಾಡಿ, ಪ್ರಸಾದ್ ಬೆಂಜನಪದವು, ವಿನಿತ್ ತುಂಬೆ, ಪ್ರವೀಣ್ ಕುಂಟಾಲಪಲ್ಕೆ, ದೀಪಕ್ ಅಜೆಕಲ, ಅಶ್ವಥ್ ಪುಂಜಾಲಕಟ್ಟೆ ಸಂದೀಪ್ ಬಂಟ್ವಾಳ ಮತ್ತಿತರರು ಇದ್ದರು.















