ಬಂಟ್ವಾಳ :ತುಂಬೆ ಗ್ರಾ ಪಂ ನಲ್ಲಿ ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ಪೂರ್ವಾಹ್ನ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ ಇವರು ಧ್ವಜರೋಹಣ ನೆರವೇರಿಸಿ, ರಾಷ್ಟ್ರಗೀತೆಯನ್ನು ಹಾಡಿ ಧ್ವಜಕ್ಕೆ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ, ದೇಶದ ಸ್ವತಂತ್ರಕ್ಕಾಗಿ ಹೋರಾಡಿದ ಮಹಾನ್ ವೀರರನ್ನು ಸ್ಮರಿಸಿ,ತುಂಬೆ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉರಿಯುತ್ತಿರುವ ಬೀದಿ ದೀಪಗಳನ್ನು ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಬೆಳಿಗ್ಗೆ ಆರಿಸಿ ಸಮಾಜ ಸೇವೆ ಮಾಡುತಿರುವ ತುಂಬೆ ಪರಿಸರದ 20 ಮಂದಿ ಗ್ರಾಮಸ್ಥರನ್ನು ಗುರುತಿಸಿ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.
ಚದುರಂಗದ ಆಟ ಆಡೋಣ ಅಭಿಯಾನವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲೆಯ ಸುಮಾರು 13 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ಶ್ರೇಯಾ ಕಾರಂತ್ ದ್ವಿತೀಯ ಸ್ಥಾನವನ್ನು ವೈಷ್ಣವ್ ಬಿ, ಹಾಗೂ ತೃತೀಯಾ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಪ್ರಶಸ್ತಿ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ತುಂಬೆ ಗ್ರಾ ಪಂ ನ
ಉಪಾಧ್ಯಕ್ಷೆ ಜಯಂತಿ ಕೇಶವ, ಸದಸ್ಯರಾದ ಹೇಮಲತಾ ಜಿ ಪೂಜಾರಿ, ಗಣೇಶ್ ಸಾಲ್ಯಾನ್ ,ಕಿಶೋರ್ ರಾಮಲ್ ಕಟ್ಟೆ , ಇಬ್ರಾಹಿಂ, ಜಯಂತಿ ಶ್ರೀಧರ, ಜಯಂತಿ ನಾಗೇಶ, ಅರುಣ್ ಗಾಣದಲಚ್ಚಿಲ್, ಜೆಸಿಂತಾ ಡಿಸೋಜ, ಮುನೀರಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಸುವರ್ಣ, ನಿವೃತ್ತ ಅಬಕಾರಿ ಇನ್ಸ್ ಪೆಕ್ಟರ್ ರಾಘವನ್ ನಾಯರ್, ಮೋನಪ್ಪ ಮಜಿ , ಅನಿಲ್ ಪಂಡಿತ್ , ಸದಾಶಿವ ಡಿ ತುಂಬೆ , ದೇವದಾಸ್ ಪರ್ಲಕ್ಕೆ, ನಿಸಾರ್ ಅಹಮ್ಮದ್, ಎಳೆಯರ ಬಳಗದ ಅಧ್ಯಕ್ಷರಾದ ಪೂಜೇಶ್ ಆಚಾರ್ಯ, ಪದ್ಮನಾಭ ಸಾಲ್ಯಾನ್ , ನವೀನ್ ಶೆಟ್ಟಿ, ನವೀನ್ ಕಲ್ಲಗುಡ್ಡೆ, ಜಗದೀಶ್ ಗಟ್ಟಿ, ಉಮೇಶ್ ರೆಂಜೋಡಿ, ಮನೋಹರ್ ಕೊಟ್ಟಾರಿ, ಜಗನ್ನಾಥ ಸಾಲ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಲೆಕ್ಕ ಸಹಾಯಕರಾದ ಚಂದ್ರಕಲಾ ಜಿ,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.















