ಮಂಗಳೂರು: ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇರಿಸಿದ್ದ ಪ್ರಕರಣಕ್ಕೆ ಸಂಬಂಧ ಪಟ್ಟ ಆರೋಪಿ ಆದಿತ್ಯ ರಾವ್ ಗೆ ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಲಯ ಶಿಕ್ಷೆ ವಿಧಿಸಿದೆ.
ಉಡುಪಿ ಜಿಲ್ಲೆಯ ಆದಿತ್ಯ ರಾವ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದ. 2018 ರಲ್ಲಿ ಬೆಂಗಳೂರು ಏರ್ ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ, ಆದರೆ ದಾಖಲೆಗಳಿಲ್ಲದೆ ಅರ್ಜಿಯನ್ನು ತಿರಸ್ಕರಿಸಿದ್ದರು. ಅದರ ಕೋಪದಿಂದ ಮಂಗಳೂರಿನ ವಿಮಾನ ನಿಲ್ದಣದಲ್ಲಿ ಬಾಂಬ್ ಇರಿಸಿದ್ದ ಎನ್ನಲಾಗಿದೆ.
2020 ರಲ್ಲಿ ಜನವರಿ 20
ಮಂಗಳೂರಿನ ವಿಮಾನ ನಿಲ್ದಣದಲ್ಲಿ ಬಾಂಬ್ ಇರಿಸಿದ್ದ, ನಂತರ ಜನವರಿ 22 ರಂದು ಬೆಂಗಳೂರಿನಲ್ಲಿ ಶರಣಾಗಿದ್ದ. ಈ ವಿಷಯಕ್ಕೆ ಎರಡು ಕೇಸ್ ದಾಖಲೆಗೊಂಡಿದ್ದು, ಒಂದರಲ್ಲಿ 20 ವರ್ಷ ಜೈಲು, 10 ಸಾವಿರ ದಂಡ, ಇನ್ನೊಂದರಲ್ಲಿ 5 ವರ್ಷ ಜೈಲು, 10 ಸಾವಿರ ದಂಡ ವಿಧಿಸಲಾಗಿದೆ.














