ನಡುಬೈಲು :ಜ.20ರಂದು ಕಲಾ ಸಂಗಮದ 30ನೇ ವಾರ್ಷಿಕೋತ್ಸವ. ಸಾಮೂಹಿಕ ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ.

Coastal Bulletin
ನಡುಬೈಲು :ಜ.20ರಂದು ಕಲಾ ಸಂಗಮದ 30ನೇ ವಾರ್ಷಿಕೋತ್ಸವ. ಸಾಮೂಹಿಕ ಸತ್ಯನಾರಾಯಣ ಪೂಜೆ, ಯಕ್ಷಗಾನ ಬಯಲಾಟ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ನಡುಬೈಲಿನ ಕಲಾ ಸಂಗಮ ಇದರ 30ನೇ ವಾರ್ಷಿಕೋತ್ಸವವು ಜ.20ರಂದು ಶನಿವಾರ ಹೊಯ್ಗೆಗದ್ದೆ ಶ್ರೀ ರಾಮ ಮಂದಿರದ ವಠಾರದಲ್ಲಿ ನಡೆಯಲಿದೆ.

ವಾರ್ಷಿಕೋತ್ಸವದ ಪ್ರಯುಕ್ತ ಅ ದಿನ ಸಂಜೆ 3 ಗಂಟೆಗೆ ನಡುಬೈಲ್ ದಿ ಕೃಷ್ಣ ಭಟ್ ರವರ ಮನೆಯಿಂದ ಕಟೀಲು ಮೇಳದ ದೇವರ ಮೆರವಣಿಗೆ ಉತ್ಸವ ಜಾಗಕ್ಕೆ ತಲುಪಲಿದೆ . ನಂತರ ಭಜನಾ ಸಂಕೀರ್ತನೆ, 3.30ಯಿಂದ

ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,5.30ಯಿಂದ ಚೌಕಿಯಲ್ಲಿ ದೇವರ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಹಾಗೂ ಕಟೀಲು ಮೇಳದವರಿಂದ "ಚತುರ್ಜನ್ಮ ಮೋಕ್ಷ'ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿಯ ಸಂಚಾಲಕ ಸುರೇಶ ಪೂಜಾರಿ ನಡುಬೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Comment