ತುಂಬೆ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ. ಬ್ರಹ್ಮಕಲಶದ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಯೋಗ ಭಾಗ್ಯ: ಕೆ ಮಂಜುನಾಥ ಭಂಡಾರಿ.

Coastal Bulletin
ತುಂಬೆ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ. ಬ್ರಹ್ಮಕಲಶದ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಯೋಗ ಭಾಗ್ಯ: ಕೆ ಮಂಜುನಾಥ ಭಂಡಾರಿ.

ಬಂಟ್ವಾಳ :ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ದಗೊಳ್ಳುತ್ತಿರುವ ತುಂಬೆ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಜ.15ರಂದು ಸೋಮವಾರ ದೇವಸ್ಥಾನದ ಸನ್ನಿದಿಯಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಜೀರ್ಣೋದ್ದಾರ ಸಮಿತಿಯ ಗೌರವಧ್ಯಕ್ಷ ಕೆ ಮಂಜುನಾಥ ಭಂಡಾರಿ ಶೆಡ್ಯ ಮಾತನಾಡಿ, ದೇವರ ಸಂಕಲ್ಪದಿಂದ ಮಾತ್ರ ಬ್ರಹ್ಮಕಲಶದ ಪುಣ್ಯ ಕಾರ್ಯ ಮಾಡುವ ಹಾಗೂ ನೋಡುವ ಯೋಗ ಭಾಗ್ಯ ನಮ್ಮದಾಗಲಿದೆ, ಈ ಪುಣ್ಯ ಕಾರ್ಯದಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಸಿಕೊಳ್ಳುದರಿಂದ ಮನೆ ಹಾಗೂ ಮನ ಪಾವನವಾಗುತ್ತದೆ,ಎಲ್ಲರೂ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗುವ ಎಂದು ಶುಭ ಹಾರೈಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಉದ್ಯಮಿ ದಿವಾಕರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ,

ದೇವದಾಸ ಶೆಟ್ಟಿ ತುಂಬೆಗುತ್ತು, ಉದ್ಯಮಿ ಅರುಣ್ ಆಳ್ವ, ಶ್ರೀಧರ ರಾವ್ , ಉಮೇಶ್ ಸುವರ್ಣ ತುಂಬೆ , ಜಗನ್ನಾಥ ಶೆಟ್ಟಿ, ಕ್ಷೇತ್ರದ ಪ್ರಧಾನ ಅರ್ಚಕ ಅಭಿಲೇಶ್ ಭಟ್ ಉಪಸ್ಥಿತರಿದ್ದರು

ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಸ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ವಾಗತಿಸಿ, ಪ್ರಚಾರ ಸಮಿತಿಯ ಸಂಚಾಲಕ ಪ್ರವೀಣ್ ಬಿ ತುಂಬೆ ಧನ್ಯವಾದವಿತ್ತು, ಸಂಧ್ಯಾ ಭಜನಾ ಸಂಘಟಕ ಹಾಗೂ ಸೇವಾ ಸಮಿತಿಯ ಕೋಶಾಧಿಕಾರಿ,ಉಮೇಶ್ ರೆಂಜೋಡಿ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಆಳ್ವ,ಗಣೇಶ ಸಾಲಿಯಾನ್, ಸದಾಶಿವ ಡಿ ತುಂಬೆ, ಸಂಜೀತ್ ಸಹಕರಿಸಿದರು.

Leave a Comment