ಬಂಟ್ವಾಳ :ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ಪರಂಗಿಪೇಟೆ ವಲಯದ ವಾರ್ಷಿಕ ಮಹಾಸಭೆಯು ಎ.13ನೇ ಅದಿತ್ಯವಾರ ಸೇವಾಂಜಲಿ ಸಭಾಭವನದಲ್ಲಿ ವಲಯದ ಅಧ್ಯಕ್ಷರಾದ ಶ್ರೀನಿವಾಸ ಮೇರಮಜಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ KSTA ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಸಾಲಿಯಾನ್ ಅತಿಥಿ ಗಣ್ಯರೊಂದಿಗೆ ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಸಂಘಟನೆ ಅಂದರೆ ಯಾವ ರೀತಿ ಇರಬೇಕು ವಲಯದ ಪದಾಧಿಕಾರಿಗಳ ಜವಾಬ್ದಾರಿ ಏನು ಎಂದು ಸದಸ್ಯರಿಗೆ ಮನವರಿಕೆ ಮಾಡಿ ಸರಕಾರದಿಂದ ಸಿಗುವ ಸೌಲಭ್ಯಕ್ಕೆ ಬೇಕಾಗಿ ಸಂಘಟನೆ ಅಲ್ಲ ನಮ್ಮ ನಮ್ಮೊಳಗೆಸಹಾಯ ಆದರೆ ಮಾತ್ರ ಸಂಘಟನೆ ಬಲಿಷ್ಠವಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ KSTA ದ.ಕ.ಜಿಲ್ಲಾ ಅಧ್ಯಕ್ಷರಾದ ವಿದ್ಯಾ ಶೆಟ್ಟಿ . KSTA ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನಾಗೇಶ ಎಂ, ಬಂಟ್ವಾಳ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾದೇಶ್ ತುಂಬೆ, ಬಂಟ್ವಾಳ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ತುಳಸಿ ಆರ್, ಜಿಲ್ಲಾ ಸಮಿತಿಯ ಸಂಘಟನಾ
ಕಾರ್ಯದರ್ಶಿ ಗಂಗಯ್ಯ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಶೋಭಾ ಸದಾನಂದ ಪ್ರಾರ್ಥಿಸಿ, ವಲಯದ ಸದಸ್ಯೆ ವಿಶಾಲಾಕ್ಷಿ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಸದಾನಂದ ತುಂಬೆ ವರದಿ ವಾಚಿಸಿದರು, ಕೋಶಾಧಿಕಾರಿ ದೇವಿಕಾ ಪೂಂಜಾ ಎರಡು ವರ್ಷದ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ವಲಯದ ಸದಸ್ಯ ಶೈಲಜಾ ಅವರ ಪುತ್ರಿ ಹತ್ತನೇ ತರಗತಿಯ ಶ್ರೀಜ ಅವರಿಗೆ ಪ್ರೋತ್ಸಾಹ ಧನ ನೀಡಲಾಯಿತು ಮತ್ತು ವಲಯದ ಸದಸ್ಯರಾದ ವಿಶ್ವನಾಥ ಅಕಾಲಿಕ ಮರಣ ಹೊಂದಿದ್ದು ಅವರ ಎರಡು ಹೆಣ್ಣು ಮಕ್ಕಳಾದ ಮೋಕ್ಷಿತಾ 4ನೇ ತರಗತಿ ದ್ವಿತಿ 3ನೇ ತರಗತಿ ಅವರ ವಿದ್ಯಾಭ್ಯಾಸಕ್ಕಾಗಿ ದನ ಸಹಾಯ ಮಾಡಲಾಯಿತು, ಕಲಡ್ಕ ವಲಯದ ಉಪಾಧ್ಯಕ್ಷರಾದ ವಸಂತ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ಶೋಭಾ ಸದಾನಂದ ಧನ್ಯವಾದ ಸಮರ್ಪಿಸಿದರು.














