ಬಂಟ್ವಾಳ : ಜೇಸಿಐ ಬಂಟ್ವಾಳ,ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ.ಮೂಡ ಕೈಕಂಬ ಇವರ ಜಂಟಿ ಆಶ್ರಯದಲ್ಲಿ ಈ ತಿಂಗಳ 5ನೇ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕೋವಿಡ್ ಲಸಿಕಾ ಕಾರ್ಯಕ್ರಮವು ಲೊರೆಟ್ಟೊ ಸಮೀಪದ ಬಾರೇಕಡು ಅಂಗನವಾಡಿ ಕೇಂದ್ರದಲ್ಲಿ ಜರುಗಿತು.
ಜೇಸಿಐ ಬಂಟ್ವಾಳದ ಅಧ್ಯಕ್ಷ ಜೇಸಿ ರೋಶನ್ ರೈ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು, ಎ ಜೆ ಸಂಸ್ಥೆ ಯ ವೈದ್ಯಾಧಿಕಾರಿ ಡಾ ಸುಶಾಂತ ಪ್ರಾಸ್ತಾವಿಕ ಮಾತನಾಡಿದರು.
ಜೇಸಿಐ ಬಂಟ್ವಾಳದ ನಿಕಟ ಪೂರ್ವಅಧ್ಯಕ್ಷ ಜೇಸಿ ಉಮೇಶ್ ಆರ್
ಮೂಲ್ಯ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಜೇಸಿ ವಲಯ ಅಧಿಕಾರಿ ಜೇಸಿ ಸಂತೋಷ್ ಜೈನ್,ಲೇಡಿ ಜೇಸಿ ನಿರ್ದೇಶಕಿ ಜೇಸಿ ದೀಪ್ತಿ ರೈ,ಉಪಾಧ್ಯಕ್ಷ ಜೇಸಿ ರಾಜೇಂದ್ರ,ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆಯರು,ಎ ಜೆ ಸಂಸ್ಥೆಯ ವೈದ್ಯರು, ಸಿಬ್ಬಂದಿಗಳು, ಜೇಸಿ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.















