Coastal Bulletin

ಬಂಟ್ವಾಳ: ಬೆಳೆಯುತ್ತಿರುವ ತಾಲೂಕು ಕೇಂದ್ರವಾದ ಬಿ.ಸಿ.ರೋಡ್ ನಲ್ಲಿ ಕಾಡುತ್ತಿರುವ ವಾಹನ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪುರಸಭಾಧ್ಯಕ್ಷರ ನೇತೃತ್ವದಲ್ಲಿ ಪೊಲೀಸ್ ಪುರಸಭಾಧಿಕಾರಿಗಳ ತಂಡ ಸೋಮವಾರ ಪರಿಶೀಲನೆ ನಡೆಸಿ ನಾಲ್ಕು ಕಡೆಗಳಲ್ಲಿ ವಾಹನಗಳ ಪಾರ್ಕಿಂಗ್ ಗೆ ಸ್ಥಳವನ್ನು ಗುರುತಿಸಿದೆ.

ಬಿ.ಸಿ.ರೋಡಿನ ಪದ್ಮಾಕಾಂಪ್ಲೆಕ್ಸ್ ಮುಂಭಾಗ, ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ಪಕ್ಕ,ಕೈಕುಂಜೆ ಭಾರತ್ ಬೀಡಿ ಬ್ರಾಂಚ್ ಬಳಿ ಹಾಗೂ ತಾಪಂ ಹಳೇ ಕಟ್ಟಡ ತೆರವುಗೊಂಡ ಖಾಲಿ ಸ್ಥಳವನ್ನು ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್,ಉಪಾಧ್ಯಕ್ಷೆ ಜೆಸಿಂತಾ ಡಿಸೋಜ,ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ,ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿವೇಕಾನಂದ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳ ತಂಡ ಗುರುತಿಸಿದೆ.

ಬಸ್ ತಂಗುದಾಣ ಪಕ್ಕ ನೋ ಪಾರ್ಕಿಂಗ್ : 

ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣ ಪಕ್ಕ ವಾಣಿಜ್ಯ ಸಂಕೀರ್ಣದ ಮುಂಭಾಗ ತಂಗುದಾಣದ ಬಳಿ ಇನ್ನು ಮುಂದೆ ಆಟೋ ರಿಕ್ಷಾ ಪಾಕ್೯ಗೆ ಅವಕಾಶ ವಿರುವುದಿಲ್ಲ,ಇಲ್ಲಿ ಪುರಸಭೆಯ ವತಿಯಿಂದ

ನೋಪಾರ್ಕಿಂಗ್ ಫಲಕ ಅಳವಡಿಸಿ ಕ್ರಮ ಕೈಗೊಳ್ಳಲಾಗುವುದು, ತಪ್ಪಿದಲ್ಲಿ ದಂಡ ವಿಧಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗುವುದು ಎಂದು ಪುರಸಭಾಧ್ಯಕ್ಷ ಶರೀಫ್ ತಿಳಿಸಿದ್ದಾರೆ.

ಆದೇರೀತಿ ಕೈಕಂಬದಲ್ಲಿ ಈಗಿರುವ ಬಸ್ ತಂಗುದಾಣವನ್ನು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಿಕ್ಷಾ ನಿಲ್ದಾಣದ ಬಳಿಗೆ ಸ್ಥಳಾಂತರಿಸಲು ಯೋಚಿಸಲಾಗಿದೆ ಎಂದ ಅಧ್ಯಕ್ಷ ಶರೀಫ್ ತಿಳಿಸಿದ್ದಾರೆ.

ಅತಿಕ್ರಮಣ ತೆರವು: 

ರಸ್ತೆಯನ್ನು ಅತಿಕ್ರಮಿಸಿ ಅಂಗಡಿ ಸಾಮಾಗ್ರಿಗಳನ್ನಿಟ್ಟು ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗುತ್ರಿರುವ ದೂರಿನ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಪುರಸಭೆಯಿಂದ ಅತಿಕ್ರಮಣವನ್ನು ತೆರವುಗೊಳಿಸಲು ಕ್ರಮಕೈಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪುರಸಭಾಧ್ಯಕ್ಷ ಶರೀಫ್ ತಿಳಿಸಿದ್ದಾರೆ. ಇಂಜಿನಿಯರ್ ಸಹಾಯಕ ಇಕ್ಬಾಲ್ ಉಪಸ್ಥಿತರಿದ್ದರು.


Leave a Comment