ಬಂಟ್ವಾಳ : ಈ ದೇಶದ ಪರಂಪರೆಗೆ ಋಷಿ ಮುನಿಗಳ ಕೂಡುಗೆ ಅನನ್ಯ,ಮಾನವನನ್ನು ಮಾದವತ್ವಕ್ಕೆ ಪರಿವರ್ತಿಸುವ ಶಕ್ತಿ ಭಾರತ ದೇಶಕ್ಕಿದೆ.ತ್ಯಾಗದಿಂದ ಭಗವಂತನ ಅನುಗ್ರಹ ಸಾಧ್ಯ,ಮನುಷ್ಯನಿಗೆ ಭಕ್ತಿ ಬೇಕು. ಶ್ರದ್ಧಾಭಕ್ತಿಯಿಂದ ಶ್ರದ್ಧಾ ಕೇಂದ್ರಗಳನ್ನು ಬೆಳೆಸಿ ನಮ್ಮ ಶ್ರದ್ದೆಯನ್ನು ಹೆಚ್ಚಿಸುವ ಕೆಲಸ ಆಗಬೇಕಿದೆ,ರಾಜಯೋಗ, ಕರ್ಮಯೋಗ, ಧ್ಯಾನಯೋಗ ಹಾಗೂ ಭಕ್ತಿ ಯೋಗದಿಂದ ದೇವರನ್ನು ಒಲಿಸಬಹುದು, ದೇವಸ್ಥಾನಕ್ಕೆ ಬಂದರೆ ಜ್ಞಾನ ಹೆಚ್ಚಾಗುತ್ತದೆ ಎಂದು ಕನ್ಯಾಡಿ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಅವರು ನೂತನವಾಗಿ ನಿರ್ಮಾಣಗೊಂಡ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.14ರಂದು ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷತೆಯನ್ನು ಉದ್ಯಮಿ ಬಿ. ರಘುನಾಥ ಸೋಮಯಾಜಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನರಹರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಶಾಂತ ಮಾರ್ಲ, ಉದ್ಯಮಿ ಜಗನ್ನಾತ ದೌಟ ಬದಿಗುಡ್ಡೆ, ಕೆ.ಎಂ.ಎಫ್. ಅಧ್ಯಕ್ಷ ಸುಚರಿತ ಶೆಟ್ಟಿ, ಪುತ್ತೂರು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕುದ್ರೋಳಿ ದೇವಸ್ಥಾನದ ಪದ್ಮರಾಜ್, ಉದ್ಯಮಿ ಅನಿಲ್
ಶೆಟ್ಟಿ, ನ್ಯಾಯವಾದಿ ಅಶ್ವನಿ ಕುಮಾರ್ ರೈ, ನ್ಯಾಯವಾದಿ ರಮೇಶ್ ಉಪಾಧ್ಯಾಯ, ಕನಪಾಡಿ ದೈವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಾಥ ರೈ, ಜ್ಯೋತಿಷಿ ಅನಿಲ್ ಪಂಡಿತ್, ಉದ್ಯಮಿ ಪಿಯೂಸ್ ರೋಡ್ರಿಗಸ್, ಕರಿಯಂಗಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪಂಚಾಯತ್ ಸದಸ್ಯ ಸುದೀಪ್ ಶೆಟ್ಟಿ ಮಾಣಿ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾ ಸಮಿತಿಯ ಕೋಶಾಧಿಕಾರಿ ಉಮೇಶ್ ರೆಂಜೋಡಿ ಸ್ವಾಗತಿಸಿ, ಬ್ರಹ್ಮಕಲಶ ಸಮಿತಿಯ ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ತುಂಬೆಗುತ್ತು ಧನ್ಯವಾದವಿತ್ತರು, ಕಿಶೋರ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.









