Coastal Bulletin

ಬಂಟ್ವಾಳ : ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ರಂಗಭೂಮಿ ಕಲಾವಿದರಾಗಿದ್ದ ದಿ.ಲಕ್ಷ್ಮಣ ಶೆಟ್ಟಿಗಾರ್,ದಿ.ಶ್ರೀಧರ್ ಕೆ.ವಿ., ದಿ.ರಘುರಾಮ ಶೆಟ್ಟಿ ಅವರ ಸ್ಮರಣಾರ್ಥ ಫೆ.4ರಿಂದ ಫೆ.11ರವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆದ ದ.ಕ.,ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಯಲ್ಲಿ ಉಡುಪಿ ಕೃಷ್ಣ ಕಲಾವಿದೆರ್ ತಂಡದ ಆನಿದ ಮನದಾನಿ ನಾಟಕ ಪ್ರಥಮ ಸ್ಥಾನ ಪಡೆದಿದೆ. ಕಲಾಮೃತ ಕಲಾವಿದೆರ್ ವಾಮಂಜೂರು ತಂಡದ ಕಥೆ ಏರ್ ಬರೆಪೆರ್ ದ್ವಿತೀಯ ಮತ್ತು ಕಲಾಶ್ರಿ ಬೆದ್ರ ತಂಡದ ಉಲಾಯಿ ಲೆಪ್ಪುಗಾ ತೃತೀಯ ಸ್ಥಾನ ಪಡೆದಿದೆ.

ಫೆ.11ರಂದು ನಡೆದ ಸಮಾರೋಪದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಉಡುಪಿ ಜಿಲ್ಲಾ ೨ನೇ ಹೆಚ್ಚುವರಿನ್ಯಾಯಾಽಶ ದಿನೇಶ್ ಹೆಗ್ಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಸಾಮಾಜಿಕ ಸೇವಾ ಉದ್ದೇಶ ಹೊಂದಿದ ಸಂಘ ಸಂಸ್ಥೆಗಳಿಂದ ಯುವ ಜನತೆ ಉತ್ತಮ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವುದರ ಜೊತೆ ಸಮಾಜದ ಅಭಿವೃದ್ಧಿಗೆ ಕಾರಣವಾಗುವುದು. ಪುಂಜಾಲಕಟ್ಟೆಯಲ್ಲಿ ಇಂತಹ ಸಂಘ ಸಂಸ್ಥೆಗಳ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.

ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಸಂಚಾಲಕ ರಕ್ಷಿತ್ ಶಿವರಾಂ ಅವರು ಮಾತನಾಡಿ, ರಂಗಭೂಮಿ ಬೆಳೆಯಲು ಸರಕಾರದ ಸಹಕಾರ ಅಗತ್ಯ. ರಂಗ ತರಬೇತಿ ಶಾಲೆಗಳ ನಿರ್ಮಾಣವಾಗಬೇಕು ಎಂದರು. 

ಉದ್ಯಮಿ ಪ್ರವೀಣ ಬಂಗೇರ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ., ಉಪನ್ಯಾಸಕ ಡಾ. ಪ್ರವೀಣ್ ರೈ, ಎಸ್‌ಇಝಡ್ ಸಂಸ್ಥೆ ಅಧಿಕಾರಿ ಯೋಗೀಶ್ ಕಳಸಡ್ಕ, ಕಜೆಕೋಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ಎಸ್.ಚಂದ್ರಶೇಖರ ಭಟ್, ಪ್ರಗತಿಪರ ಕೃಷಿಕರಾದ ಜಯಚಂದ್ರ ಬೊಳ್ಮಾರು,  ಸುಧಾಕರ ಶೆಣೈ ಖಂಡಿಗ, ಸುಧಿರ್ ಶೆಟ್ಟಿ , ಪಿಲಾತಬೆಟ್ಟು ವ್ಯ.ಸೇ.ಸಂಘದ ಉಪಾಧ್ಯಕ್ಷ ಉಮೇಶ್ ಪೂಜಾರಿ ತಿಮರಡ್ಡ, ಉದ್ಯಮಿ ಜಯಂತ್ ಶೆಟ್ಟಿ ಮಡಂತ್ಯಾರು, ಗುತ್ತಿಗೆದಾರ ಮೋಹನ ಶೆಟ್ಟಿ ನರ್ವಲ್ದಡ್ಡ, ಮಿತ್ರ ಮಂಡಳಿಯ ಅಧ್ಯಕ್ಷ ಪ್ರವೀಣ ಶೆಟ್ಟಿ, ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಲತಾ ಮೋಹನ್,ಗೌರವಾಧ್ಯಕ್ಷೆ ಆಶಾ ದಿನಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪುರಸ್ಕೃತ ಚಂದ್ರನ್ ಕಿರು ಚಿತ್ರ ತಂಡ ಹಾಗೂ ತೀರ್ಪುಗಾರರಾದ ಡಿ.ಎಸ್.ಬೋಳೂರು,ಬಿ.ರಾಮಚಂದ್ರ ರಾವ್,ಬಿ.ಚೇತನ್ ರೈ ಮಾಣಿ ಅವರನ್ನು ಸಮ್ಮಾನಿಸಲಾಯಿತು.  

ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮೇಲ್ಮನೆ ಸ್ವಾಗತಿಸಿದರು.ಕಾರ್ಯದರ್ಶಿ ಮಂಜಪ್ಪ ಮೂಲ್ಯ ವಂದಿಸಿದರು.  ಪತ್ರಕರ್ತರಾದ ರತ್ನದೇವ್ ಮತ್ತು ಗೋಪಾಲ್ ಅಂಚನ್  ಕಾರ್ಯಕ್ರಮ ನಿರೂಪಿಸಿದರು. ಬಳಿಕ  ತೆಲಿಕೆ ಬಂಜಿ ನಿಲಿಕೆ ಕಾಮಿಡಿ ಶೋ ಪ್ರದರ್ಶನಗೊಂಡಿತು.

ವೈಯ್ಯಕ್ತಿಕ ಬಹುಮಾನ: ಉತ್ತಮ ನಿರ್ದೇಶನ-ಪ್ರಥಮ: ಸುರೇಶ್ ಶೆಟ್ಟಿ ಪಾಡಿಗಾರ್(ಆನಿದ ಮನದಾನಿ),  ದ್ವಿತೀಯ: ಶ್ರೀಧರ ಶೆಟ್ಟಿ (ಕಥೆ ಏರ್ ಬರೆಪೆರ್), ತೃತೀಯ: ಮಣಿ ಕೋಟೆಬಾಗಿಲು(ಭರಣಿ ಕೃತ್ತಿಕೆ)  

ಉತ್ತಮ ಹಿನ್ನೆಲೆ ಸಂಗೀತ ಪ್ರಥಮ: ಗೋಪಾಲಕೃಷ್ಣ ಶೆಟ್ಟಿ (ಆನಿದ ಮನದಾನಿ), ದ್ವಿತೀಯ: ರಾಜೇಶ್ ಆಚಾರ್ಯ(ಕಥೆ ಏರ್ ಬರೆಪೆರ್), ತೃತೀಯ: (ಭರಣಿ ಕೃತ್ತಿಕೆ).  

ರಂಗ ವಿನ್ಯಾಸ: ಪ್ರಥಮ: ಆನಿದ ಮನದಾನಿ, ದ್ವಿತೀಯ: ಭರಣಿ ಕೃತಿಕೆ, ತೃತೀಯ : ಕಥೆ ಏರ್ ಬರೆಪೆರ್  

ಪ್ರಸಾದನ: ಪ್ರಥಮ: ಆನಿದ ಮನದಾನಿ, ದ್ವಿತೀಯ: ಕಥೆ ಏರ್ ಬರೆಪೆರ್, ತೃತೀಯ: ದಿಬ್ಬಣ (ಪಲ್ಲವಿ ಕಲಾವಿದೆರ್ ಕಾರ್ಕಳ), ಧ್ವನಿ ಮತ್ತು ಬೆಳಕು:ಪ್ರಥಮ: ಆನಿದ ಮನದಾನಿ, ದ್ವಿತೀಯ: ಕಥೆ ಏರ್ ಬರೆಪೆರ್, ತೃತೀಯ:ದಿಬ್ಬಣ.  ಉತ್ತಮ ನಟ- ಪ್ರಥಮ: ಪ್ರವೀಣ್ ಮೂಡುಶೆಡ್ಡೆ (ಕಥೆ ಏರ್ ಬರೆಪೆರ್),ದ್ವಿತೀಯ: ಯುವ ಶೆಟ್ಟಿ ಮೂಡುಬಿದಿರೆ, (ಉಲಾಯಿ ಲೆಪ್ಪುಗಾ), ಉತ್ತಮ ನಟಿ -ಪ್ರಥಮ: ಶ್ರೀಯ ದೇವಾಡಿಗ(ಆನಿದ ಮನದಾನಿ) ,ದ್ವಿತೀಯ :ಮಣಿ ಕೋಟೆಬಾಗಿಲು(ಭರಣಿ ಕೃತಿಕೆ).

Leave a Comment