ಬಂಟ್ವಾಳ : ತಾಲೂಕಿನ ತುಂಬೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ.18 ರಂದು ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಜರಗಲಿದೆ.
ಮಧ್ಯಾಹ್ನ 12.30 ಕ್ಕೆ ಶ್ರೀ ದೇವರಿಗೆ ವಿಶೇಷ ಪೂಜೆ ಮತ್ತು ಶಿವ ಜಾಗರಣೆ ಪ್ರಯುಕ್ತ ರಾತ್ರಿ 12 ಗಂಟೆಗೆ ಮಹಾಪೂಜೆ
ಇರಲಿದೆ.ಸೂರ್ಯಾಸ್ತಮಾನದಿಂದ ಸೂರ್ಯೋದಯದ ತನಕ ವಿವಿಧ ಭಜನಾ ತಂಡಗಳಿಂದ ಆಹೋರಾತ್ರಿ ಭಜನಾ ಸೇವಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














