Coastal Bulletin

ದೇವಂದಬೆಟ್ಟು : ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ಪ್ರಯುಕ್ತ ದೇವಸ್ಥಾನದಲ್ಲಿ ನೂತನವಾಗಿ ಗೋಶಾಲೆ, ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಯೋಜನೆ ಸಾಕಾರಗೊಳಿಸುವುದೇ ಅಸಾಧ್ಯವಾಗಿತ್ತು. ಅಲ್ಲದೇ ದೇವಸ್ಥಾನದ ಹಿಂಬದಿ ರಸ್ತೆ ಕಿರಿದಾಗಿದ್ದು, ಆಟೋ ರಿಕ್ಷಾ ಚಲಿಸುವುದು ಕೂಡಾ ಕಠಿಣವಾಗಿತ್ತು. ದೇವಸ್ಥಾನಕ್ಕೆ ಸಾಮಾಗ್ರಿಗಳನ್ನು ಸುಲಭವಾಗಿ ಸಾಗಿಸಲು ಈ ರಸ್ತೆ ಅಭಿವೃದ್ಧಿ ಪಡಿಸುವುದು ಕೂಡಾ ಅತ್ಯಗತ್ಯವಾಗಿತ್ತು. ಈ ಎರಡೂ ಯೋಜನೆಗಳು ನೆನೆಗುದಿಗೆ ಬೀಳುವ ಸಂದರ್ಭದಲ್ಲಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಖಾಸಗಿ ಜಮೀನುದಾರರ ಜೊತೆಗೆ ಮಾತುಕತೆ ನಡೆಸಿ, ಯೋಜನೆಗೆ ಬೇಕಾಗುವಷ್ಟು ಜಮೀನನ್ನು ತನ್ನ ಸ್ವಂತ ಹಣದಿಂದ ಜಮೀನು ಮಾಲೀಕರಿಂದ ಖರೀದಿಸಿ ಜಮೀನನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಹಸ್ತಾಂತರಿಸಿದ್ದಾರೆ.

ಅಲ್ಲದೆ ಈ ರಸ್ತೆ ಕಾಂಕ್ರೀಟೀಕರಣಗೊಳಿಸಲು ಸರ್ಕಾರದಿಂದ ಅನುದಾನವನ್ನೂ ಒದಗಿಸಿದ್ದಾರೆ. ಸಮಸ್ಯೆಗೆ ಕೂಡಲೇ

ಸ್ಪಂದಿಸಿ ದೇವಸ್ಥಾನದ ಅಭಿವೃದ್ಧಿ ಅಗತ್ಯವಾದ ಜಾಗವನ್ನು ಒದಗಿಸಿ ಗ್ರಾಮಸ್ಥರ ವ್ಯಾಪಕ ಪ್ರಸಂಸೆಗೆ ಪಾತ್ರರಾಗಿದ್ದಾರೆ.

Leave a Comment