ಬಂಟ್ವಾಳ :ಕಾರಣಿಕ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜ್ಯೋತಿಗುಡ್ಡೆ ಇಲ್ಲಿ ನವರಾತ್ರಿ ಉತ್ಸವವು ಅಕ್ಟೋಬರ್ 15ರಿಂದ 23ರ ತನಕ ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.
ಪ್ರತಿದಿನ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು , ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಏಕಾಹ ಭಜನೆ, ಸಂಧ್ಯಾದೀಪ ಪ್ರಜ್ವಲನೆ,ಹಾಗೂ ನವರಾತ್ರಿ
ಪ್ರಯುಕ್ತ ಮಹಾಪೂಜೆಯ ನಂತರ ಅನ್ನಪ್ರಸಾದ ನಡೆಯಲಿದ್ದು,ಅ.24ರಂದು ವಿಜಯ ದಶಮಿ ಪ್ರಯುಕ್ತ ದೇವರಿಗೆ ಸಿಯಾಳಭಿಷೇಕ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.















