ಬಂಟ್ವಾಳ :ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಇದರ ವಿಟ್ಲ ವಲಯ ಸಮಿತಿಯ ವಾರ್ಷಿಕ ಮಹಾ ಸಭೆಯು ಮಾ 13 ರಂದು ಭಾನುವಾರ ಬೆಳಿಗ್ಗೆ ವಿಟ್ಲ ಪಂಚಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ವಲಯ ಅಧ್ಯಕ್ಷ ಸೀತಾರಾಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು
ಸಭೆಗೆ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕೆ.ಎಸ್.ಟಿ.ಎ ಯ ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ ಮಾತನಾಡಿ, ಸಂಘಟನೆಯು ಬಲಯುತವಾಗ ಬೇಕಾದರೆ ನಾವು ಸಂಘಟಿತರಾಗುವುದು ಅಗತ್ಯ, ಈ ನಿಟ್ಟಿನಲ್ಲಿ ಸದಸ್ಯರೆಲ್ಲರೂ ಸಕ್ರಿಯವಾಗಿ ಕಾರ್ಯ ಪ್ರವೃತ್ತರಾಗಿ ಸಂಸ್ಥೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳುತ್ತಾ, ಸ್ಮಾರ್ಟ್ ಕಾರ್ಡ್ ಮತ್ತು ಇ ಶ್ರಮ ಕಾರ್ಡಿನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಶಕ್ತರಿಗೆ ಎರಡು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಮತ್ತು ನಿಕಟಪೂರ್ವ ವಲಯಧ್ಯಕ್ಷ ದಿ. ರುಕುಮ ಟೈಲರ್ ಪರವಾಗಿ ಅವರ ಕುಟುಂಬದ
ಸದಸ್ಯರನ್ನು ಫಲಪುಷ್ಪ ನೀಡಿ ಗೌರವಿಸಲಾಯಿತು.
ಈ ಸಭೆಯಲ್ಲಿ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಈಶ್ವರ್ ಕುಲಾಲ್, ಸದಸ್ಯ ಗಂಗಯ್ಯ. ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ನಾಗೇಶ್ ಎಮ್ , ಪ್ರಧಾನ ಕಾರ್ಯದರ್ಶಿ ಯಾದೇಶ್ ತುಂಬೆ, ಕೋಶಾಧಿಕಾರಿ ತುಳಸಿ ಅರ್, ಉಪಾಧ್ಯಕ್ಷ ವಸಂತ ಮೂಲ್ಯ, ಹಾಗೂ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಸುಮಿತ್ರಾ ವರದಿ ವಾಚಿಸಿ, ಶಾಲಿನಿ ಲೆಕ್ಕ ಪತ್ರ ಮಂಡಿಸಿದರು.ಪ್ರಾರ್ಥನೆ ಮತ್ತು ಧನ್ಯವಾದ ವಸಂತಿ ಅಮೈ ಮಾಡಿ, ವಸಂತ್ ಶೆಟ್ಟಿ.ಸ್ವಾಗತ ಮತ್ತು ನಿರೂಪಣೆ ಮಾಡಿದರು.














