ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನದಲ್ಲಿ ಪುನರ್ ನಿರ್ಮಾಣಗೊಂಡ ನಾಗನಕಟ್ಟೆಯಲ್ಲಿ ನಾಗದೇವರ ಪ್ರತಿಷ್ಠಾ ಮಹೋತ್ಸವ ಮತ್ತು ಆಶ್ಲೇಷಾ ಬಲಿ ಪೂಜೆ ಸೋಮವಾರ ನಡೆಯಿತು.
ವೇದಮೂರ್ತಿ ಲಕ್ಷ್ಮೀಕಾಂತ ಆಚಾರ್ಯ ಮತ್ತು ಪ್ರಧಾನ ಅರ್ಚಕ ನಾರಾಯಣ ತಿಬರಾಯ ನೇತೃತ್ವದಲ್ಲಿ ಪ್ರತಿಷ್ಠಾ ಹೋಮ, ನಾಗಪ್ರತಿಷ್ಠೆ, ನವಕ ಕಲಶ, ನಾಗತಂಬಿಲ ಮತ್ತು ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.
ಇದೇ ವೇಳೆ ಪರಶುರಾಮ ಋಷಿ ತಪಸ್ಸು ಮಾಡಿದ ತಾಣ ಎಂದೇ ಗುರುತಿಸಿಕೊಂಡ ಗಾಯತ್ರಿ ದೇವಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ
ನಡೆಯಿತು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಬೂಬ ಸಪಲ್ಯ ಮುಂಡಬೈಲು, ಸೇವಾಕರ್ತ ಕವಿತಾ ಮೋಹನ್ ಕುಮಾರ್ ಬೆಂಗಳೂರು, ಬಂಟ್ವಾಳ ಪುರಸಭೆ ಮಾಜಿ ಸದಸ್ಯ ಜಗದೀಶ ಕುಂದರ್, ಉದ್ಯಮಿ ನವೀನ್ ಕೋಟ್ಯಾನ್ ಬಿ.ಸಿ.ರೋಡು, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತಿತರರು ಇದ್ದರು.
















