Coastal Bulletin

ಬಂಟ್ವಾಳ: ಜೆಸಿಐ ಜೋಡುಮಾರ್ಗ ನೇತ್ರಾವತಿಯ ವತಿಯಿಂದ‌ ಪರಿಸರ ದಿನಾಚರಣೆ ಪ್ರಯುಕ್ತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಪರಿಸರ ಗೀತೆಗಳ ರಚನಾ ಸ್ಪರ್ಧೆ ಏರ್ಪಡಿಸಲಾಗಿದೆ.

ಪ್ರಬಂಧ ಸ್ಪರ್ಧೆ ಯಲ್ಲಿ ಪ್ರೌಢಶಾಲಾ ವಿಭಾಗಕ್ಕೆ- "ರಕ್ಷಿಸಿ ಇಳೆ-ಉಳಿಸಿ ಜೀವ ಸಂಕುಲದ ನೆಲೆ" ಹಾಗೂ ಪದವಿಪೂರ್ವ ಕಾಲೇಜು ವಿಭಾಗಕ್ಕೆ- "ಸುಸ್ಥಿರ ಬದುಕಿಗಾಗಿ ಪ್ರಕೃತಿಯೊಂದಿಗೆ ಸಾಮರಸ್ಯ" ಎನ್ನುವ ವಿಷಯ ನೀಡಲಾಗಿದೆ.

ಪರಿಸರ ಗೀತೆಗಳನ್ನು ಹಾಗೂ ಪ್ರಬಂಧವನ್ನು A4 ಹಾಳೆಯಲ್ಲಿ ಬರೆದು ಸಂಸ್ಥೆಯ ಮುಖ್ಯಸ್ಥರ ಮೊಹರು ಮತ್ತು ಸಹಿ ಮಾಡಿ ಪಿಡಿಎಫ್ ಮಾಡಿ ಕಳುಹಿಸಬೇಕು.

ಪುಬಂಧಕ್ಕೆ A4 ಹಾಳೆಯ ಎರಡು ಪುಟದ ಮಿತಿ‌ಇದೆ ಎಂದು

ಜೆಸಿಐ ಜೋಡುಮಾರ್ಗ ನೇತ್ರಾವತಿಯ ಅಧ್ಯಕ್ಷ ಹರಿಪ್ರಸಾದ್ ಕುಲಾಲ್ ತಿಳಿಸಿದ್ದಾರೆ. 

ಪ್ರತಿ ವಿಭಾಗದಲ್ಲೂ ಪ್ರಥಮ ಬಹುಮಾನ 1000ರೂ ಹಾಗೂ ದ್ವಿತೀಯ ಬಹುಮಾನ 500ರೂ ಆಗಿರುತ್ತದೆ.

ವಿಜೇತರಿಗೆ ಬಹುಮಾನಗಳನ್ನು ಜೂ.26 ರಂದು ನಡೆಯುವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು.

ಪ್ರಬಂಧ ಮತ್ತು ಪರಿಸರ ಗೀತೆಗಳನ್ನು ಜೂ.20 ರ ಒಳಗೆ 9900403723 ಅಥವಾ 8861234194 ನಂಬರ್ ಗೆ ಕಳುಹಿಸಿರಿ. ಸ್ಪರ್ಧಿಗಳು ವಿಳಾಸ ಮತ್ತು ದೂರವಾಣಿ ಸಂಖ್ಯೆ ತಪ್ಪದೇ ನಮೂದಿಸಬೇಕು ಎಂದವರು ತಿಳಿಸಿದ್ದಾರೆ.

Leave a Comment