ನಾಲ್ಕೂರು : ನಾಲ್ಕೂರು ಗ್ರಾಮದ ಯುವಕರ ತಂಡ " "ಹೊಂಬೆಳಕು" ನ.14ಕ್ಕೆ ಅಸ್ತಿತ್ವಕ್ಕೆ ಬಂದಿದ್ದು, ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ ಎಂಬ ಉದ್ದೇಶ ಇಟ್ಟುಕೊಂಡಿದ್ದರು. ಇದೀಗ ಕೃಷಿಕರಾದ ಎಂ.ಕೆ.ಮೋಹನ್ ಕುಮಾರ್ ತಂಡದ ಸದಸ್ಯರಿಗೆ ಸಮವಸ್ತ್ರ ನೀಡುವ ಮೂಲಕ ಚಾಲನೆ ನೀಡಿ, ಶುಭ ಹಾರೈಸಿದರು.
ತಂಡವು ಸರ್ಕಾರದ ಕಟ್ಟಡಗಳಾದ ಬಸ್ಸು ತಂದುದಾಣ,ಶಾಲೆ ಹಾಗೂ ಇನ್ನಿತರ ಕಟ್ಟಡಗಳನ್ನು ಒಂದು ಗಂಟೆ ,ಒಂದು ದಿನ ಸ್ವಚ್ಛತೆ ಮಾಡುವುದಾಗಿ ನಿರ್ಧರಿಸಲಾಗಿದೆ.ಪ್ರಥಮವಾಗಿ ಗ್ರಾಮದ ದಂಡಿನಮನೆ ಶಾಲಾ ಬಳಿ , ಬಸ್ಸು ತಂಗುದಾಣವನ್ನು ಸ್ವಚ್ಛಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ
ತಂಡದ ಸದಸ್ಯರಾದ ಡಿ.ಆರ್ ಉದಯಕುಮಾರ್ ಸ್ವಾಗತಿಸಿ, ದಿನೇಶ್ ಹಾಲೆಮಜಲು ಎಂ.ಕೆ. ಮೋಹನ್ ಕುಮಾರ್ ರನ್ನು ಗೌರವಿಸಿದರು. ತಂಡದ ಸಂಚಾಲಕ ಚರಣ್ ಟಿ.ಕೆ ಧನ್ಯವಾದ ಮಾಡಿದರು. ಸ್ವಚ್ಛತೆಯಲ್ಲಿ ತಂಡದ 15 ಸದಸ್ಯರು ಭಾಗವಹಿಸಿದ್ದರು.














