Coastal Bulletin

ಬಂಟ್ವಾಳ: ಇಲ್ಲಿನ ದಡ್ಡಲಕಾಡು ಸರಕಾರಿ ಆಂಗ್ಲಮಾಧ್ಯಮ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಶನಿವಾರ ಗಂಜಿಮಠದಲ್ಲಿರುವ ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರೊಂದಿಗೆ ಕೃಷಿ ಸಂವಾದ ನಡೆಸಿದರು. ಶಿಕ್ಷಣದ ಜೊತೆಗೆ ಕೃಷಿ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳು ಆಸಕ್ತಿ ಬೆಳೆಸುವಂತೆ ಶಾಸಕ ರಾಜೇಶ್ ನಾಯ್ಕ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ದಡ್ಡಲಕಾಡು ಶಾಲೆಯ ಬೆಳವಣಿಗೆಗೆ ಕಾರಣೀಕರ್ತರಾದ  ಪ್ರಕಾಶ ಅಂಚನ್ ರವರ ಸಾಧನೆಯನ್ನು ಶ್ಲಾಘಿಸಿದ ಶಾಸಕರು  ವಿದ್ಯಾರ್ಥಿಗಳು ಕೂಡ ತಮ್ಮ ಸಾಧನೆಯ ಮೂಲಕ ಸಮಾಜದ ಸತ್ಪ್ರಜೆಯಾಗಬೇಕೆಂದು ಶಾಸಕರು ತಿಳಿಸಿದರು.

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕರು ತಮ್ಮ  ಬರಡಾದ ಭೂಮಿಯನ್ನು ಹಸಿರಾಗಿಸಿರುವ  ಪರಿಶ್ರಮ ಹಾಗೂ ಗೋಮಾತೆಯ ಮಹತ್ವದ ಬಗ್ಗೆ ವಿವರಿಸಿದರು.

 ವಿದ್ಯಾರ್ಥಿಗಳೆಲ್ಲರೂ ಫಾರ್ಮ್ ಹೌಸ್ ನ ಸಹಾಯಕರೊಂದಿಗೆ ವಿವಿಧ ತಳಿಯ ಗೋವುಗಳು,

ಸಾವಯವ ಫವರ್ ಜನರೇಷನ್,  ಹಣ್ಣುಗಳ ತೋಟ , ಅಡಿಕೆ ತೋಟದ ಬಗ್ಗೆ ಮಾಹಿತಿ ಪಡೆದರಲ್ಲದೆ ಕೆರೆಯನ್ನು ವೀಕ್ಷಿಸಿ ಸಂತಸಪಟ್ಟರು.  ಪರೀಕ್ಷಾ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಒಡ್ಡೂರು ಫಾಮ್೯ ನಲ್ಲಿನ ಕೃಷಿ ಚಟುವಟಿಕೆಯನ್ನು‌ ಕಂಡು ಖುಷಿ ಪಟ್ಟರು.

  ಈ ಸಂದರ್ಭದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಕಾಶ್ ಅಂಚನ್, ಮುಖ್ಯೋಪದ್ಯಾಯರಾದ ರಮಾನಂದ್,ಶಿಕ್ಷಕಿ ಅನಿತಾ,ಪುರುಷೋತ್ತಮ ಅಂಚನ್ ಉಪಸ್ಥಿತರಿದ್ದರು.

Leave a Comment