ಬಂಟ್ವಾಳ : ಸರ್ವೇಸಾಮಾನ್ಯನು ಆಧ್ಯಾತ್ಮ ನಾಗುವುದೇ ಭಾರತದ ಸಂಸ್ಕೃತಿಯ ಮೂಲ ಚಿಂತನೆಯಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದ್ದಾರೆ. ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ನಡೆದ ದೀಪ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ,ವಿದ್ಯಾರ್ಥಿಗಳಿಗೆ ತಿಲಕ ಧಾರಣೆ ಗೈದು ಮಾತನಾಡಿದ ಅವರು ವಿಷಯ ಜ್ಞಾನದ ಜೊತೆ ಬದುಕಿನ ಸಂಸ್ಕಾರ ಬೆಳೆಸುವುದೇ ವಿದ್ಯೆ ಎಂದರು.
ವಿಷಯಜ್ಞಾನ,ಸಾಂಸ್ಕೃತಿಕ ದೃಷ್ಟಿಕೋನ, ಭಾವನಾತ್ಮಕ ದೃಷ್ಟಿಕೋನ , ಆಧ್ಯಾತ್ಮಿಕ ಈ ನಾಲ್ಕು ಸಂಗತಿಯನ್ನು ಕೊಡುವುದೇ ಭಾರತದ ಶ್ರೇಷ್ಠತೆ ಇದನ್ನೇ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಳೆದ 42 ವರ್ಷದಿಂದ ವಿದ್ಯಾರ್ಥಿಗಳಿಗೆ ಬೋದಿಸುತ್ತಾ ಬರುತ್ತಿದ್ದು, ಶಿಕ್ಷಣ ಕ್ಷೇತ್ರದಲ್ಲಿ " ಶ್ರೀರಾಮ ಬ್ರಾಂಡ್ " ಎಂದೇ ಖ್ಯಾತಿ ಗಳಿಸಿದೆ ಎಂದರು.
ಹತ್ತನೇ ತರಗತಿ ವಿದ್ಯಾರ್ಥಿಗಳು ಭಾರತೀಯ ಉಡುಗೆಯನ್ನು ( ಹುಡುಗರು ಧೋತಿ,ಅಂಗಿ,ಹುಡುಗಿಯರು ಸೀರೆ, ರವಿಕೆ ) ತೊಟ್ಟು ಸಂಭ್ರಮದಿಂದ ಭಾರತ ಮಾತೆಗೆ ಪುಷ್ಪಾರ್ಚನೆಗೈದು ಹಿರಿಯರಿಂದ ತಿಲಕ ಧಾರಣೆಯೊಂದಿಗೆ ಆಶೀರ್ವಾದ ಪಡೆದರು.
ಪ್ರೌಢಶಾಲಾ ವಿದ್ಯಾರ್ಥಿ ಪ್ರೇರಣಾ ಸ್ಯಾಕ್ಸೋಫೋನ್ ಹಾರ್ಮೋನಿಯಂ ಕಾರ್ತಿಕ್ ಕೊಳಲು ಆತ್ರೇಯ ತಬಲಾವಾದನ ಹಾಗೂ ವೇದಘೋಷ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟರು. ನಂತರ 9ನೇ ತರಗತಿ ವಿದ್ಯಾರ್ಥಿಗಳು ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ದೀಪ ಪಡೆದು ವಂದಿಸಿದರು.ವಿದ್ಯಾರ್ಥಿಗಳಾದ ಆದಿತ್ಯ ಕೃಷ್ಣ , ಆಯಿಷಾ ರಫಿಯಾ , ವರಲಕ್ಷ್ಮಿ , ಜಯಸೂರ್ಯ, ವಿಜಯಲಕ್ಷ್ಮಿ
, ಚೈತನ್ಯ , ಸ್ವಾತಿ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶಾಂಭವಿ ಮಾತಾಜಿ ಮಾತನಾಡಿ, ಇತರರಿಗಾಗಿ ಹಾಗೂ ರಾಷ್ಟ್ರಕ್ಕಾಗಿ ಬದುಕಿದವರು ನಿಜವಾದ ಸಾಧಕರಾಗಿ ಯಶಸ್ಸನ್ನು ಗಳಿಸಲು ಸಾಧ್ಯವಿದೆ ಎಂದರು.
ಬೆಂಗಳೂರಿನ ಉದ್ಯಮಿ ವೆಂಕಟೇಶ ಕಾಕುಡಾ,ಮಂಗಳೂರು ಸ್ಕೂಲ್ ಬುಕ್‌ಕಂಪೆನಿಯ ನೀರಜ್ ಭಂಡಾರಿ,ಕುಮುಟಾ ಎಕ್ಸಲೆನ್ಸಿ ಕಾಲೇಜಿನ ಉಪನ್ಯಾಸಕಿ ಚೈತ್ರ ಹೆಗಡೆ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಪ್ರಗತಿಪರ ಮತ್ತು ಸಾವಯವ ಕೃಷಿಕರಾದ ಲಕ್ಷ್ಮೀನಾರಾಯಣ ಪಾರಾಡ್ಕರ್ ,ಬಿಜೆಪಿ ಮಖಂಡ ವಿಜಯ ಭಂಡಾರಿ, ಸಿದ್ದಕಟ್ಟೆ ವ್ಯವಸಾಯಿಕ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಸ್ಕೂಲ್ ಬುಕ್ ಕಂಪನಿ ಮಾರ್ಕೆಟಿಂಗ್ ಮ್ಯಾನೇಜರ್ ಧೀರಜ್ ನಾಯಕ್, ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ವಸಂತಮಾಧವ, ಸಹ ಸಂಚಾಲಕ ರಮೇಶ್ , ಡಾ. ಕಮಲಾ ಪ್ರಭಾಕರ್ ಭಟ್,ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅನುಷಾ ಪ್ರೇರಣ ಗೀತೆ ಹಾಡಿ, ಶ್ರೀನಿವಾಸ ಸ್ವಾಗತಿಸಿದರು, ಮನಸ್ವಿ ವಂದಿಸಿದರು.ಚಿನ್ಮಯ್ ಕಾರ್ಯಕ್ರಮ ನಿರೂಪಿಸಿದರು.














