ಮೋಹನ್ ಕೆ ಶ್ರೀಯಾನ ರಾಯಿ

ಬಂಟ್ವಾಳ: ಇಲ್ಲಿನ ಒಟ್ಟು 58 ಗ್ರಾಮ ಪಂಚಾಯಿತಿಗಳ ಪೈಕಿ 23 ಗ್ರಾಮ ಪಂಚಾಯಿತಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದ್ದು, 33 ಗ್ರಾಮ ಪಂಚಾಯಿತಿಗೆ ಸರ್ಕಾರಿ ಜಮೀನು ಮಂಜೂರಾಗಿ ಇನ್ನೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ

ಉಳಿದಂತೆ ಸಜಿಪನಡು ಮತ್ತು ಸಜಿಪಮುನ್ನೂರು ಗ್ರಾಮ ಪಂಚಾಯಿತಿನಲ್ಲಿ ತಲಾ ಒಂದು ಎಕರೆಯಂತೆ ಜಮೀನು ಮೀಸಲಿಟ್ಟರೂ ಕಂದಾಯ ಇಲಾಖೆ ಜಮೀನು ಸರ್ವೆ ಮತ್ತು ಅರ್ಜಿ 57 ವಿಚಾರಣೆಗೆ ಮೀನ-ಮೇಷ ಎಣಿಸುತ್ತಿರುವ ಆರೋಪ ಎದುರಿಸುತ್ತಿದೆ.

ಈಗಾಗಲೇ ಕಾಮಗಾರಿ ಪೂರ್ಣಗೊಳಿಸಿದ ಮಣಿನಾಲ್ಕೂರು ಗ್ರಾಮ ಪಂಚಾಯಿತಿ ಗರಿಷ್ಟ 2.64ಎಕರೆ ಜಮೀನು ಮೀಸಲಿಟ್ಟಿದ್ದರೆ, ವಿಟ್ಲಪಡ್ನೂರು, ಇರಾ ಮತ್ತು ನರಿಂಗಾನ ತಲಾ 2 ಎಕರೆ ಮೀಸಲಿಟ್ಟಿದೆ. ಇಲ್ಲಿನ ಇರ್ವತ್ತೂರು-1.25 ಎಕರೆ, ತುಂಬೆ, ನಾವೂರು, ನೆಟ್ಲಮುಡ್ನೂರು, ಸರಪಾಡಿ, ಗೋಳ್ತಮಜಲು, ಕುರ್ನಡು, ಇಡ್ಕಿದು, ಕಡೇಶ್ವಾಲ್ಯ, ಬೋಳಂತೂರು, ಬಡಗಬೆಳ್ಳೂರು, ಕೊಳ್ನಾಡು ಗ್ರಾಮ ಪಂಚಾಯಿತಿನಲ್ಲಿ ತಲಾ-1 ಎಕರೆ ಜಮೀನು ಮೀಸಲಿಟ್ಟಿದೆ. ಆದರೆ ಅನಂತಾಡಿ, ಪುಣಚ ಮತ್ತು ಕಾವಳಪಡೂರು ಗ್ರಾಮ ಪಂಚಾಯಿತಿನಲ್ಲಿ ಕನಿಷ್ಟ ತಲಾ 2ಸೆಂಟ್ಸ್, 5ಸೆಂಟ್ಸ್ ಮತ್ತು 12 ಸೆಂಟ್ಸ್ ಮೀಸಲಿಟ್ಟರೆ ಉಳಿದಂತೆ ಬಹುತೇಕ ಎಲ್ಲಾ ಪಂಚಾಯಿತಿನಲ್ಲಿ 25ರಿಂದ 75ಸೆಂಟ್ಸ್ ತನಕ ಜಮೀನು ಮೀಸಲಿಟ್ಟಿದೆ. ಈ ಪೈಕಿ ಮಾಣಿ ಮತ್ತು

ಪೆರಾಜೆ, ಸಂಗಬೆಟ್ಟು ಮತ್ತು ಕುಕ್ಕಿಪಾಡಿ ಜಂಟಿಯಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತ್ಯೇಕಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈ ನಡುವೆ ಕಾಮಗಾರಿ ಪೂರ್ಣಗೊಂಡಿದೆ ಎಂದು ವರದಿ ಸಲ್ಲಿಸಿರುವ ಕೆಲವೊಂದು ಪಂಚಾಯಿತಿಗಳು ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಆರೋಪವೂ ಸ್ಥಳೀಯರಿಂದ ಕೇಳಿ ಬಂದಿದೆ.

ಈಗಾಗಲೇ ಪುರಸಭೆ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಯಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಇಲ್ಲಿನ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ವಿವಾದ ಕಳೆದ 10 ವರ್ಷಗಳಿಂದಲೂ ಮುಂದುವರಿದಿದೆ. 

ಅನಿಸಿಕೆ:

ಸಕಾರದ ಆದೇಶದಂತೆ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿಮರ್ಾಣ ಕಡ್ಡಾಯಗೊಳಿಸಿದ್ದು, ಈ ಬಗ್ಗೆ ಎಲ್ಲಾ ಪಂಚಾಯಿತಿಗೂ ತಿಳಿಸಲಾಗಿದೆ. -ರಾಜಣ್ಣ ತಾ.ಪಂ.ಕಾರ್ಯನಿರ್ವಹಣಾಧಿಕಾರಿ

ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ 40 ಸೆಂಟ್ಸ್ ಜಮೀನು ಮೀಸಲಿಟ್ಟು ತ್ಯಾಜ್ಯ ವಿಲೇವಾರಿ ಘಟನೆ ನಿಮರ್ಾಣ ಕಾಮಗಾರಿ ನಡೆದಿದ್ದು, ಶೀಘ್ರವೇ ತ್ಯಾಜ್ಯ ಸಮಸ್ಯೆ ನಿವಾರಣೆಯಾಗಲಿದೆ. -ಮಧು ಟಿ.ಎಲ್. ಪಿಡಿಒ

Leave a Comment