ಬಂಟ್ವಾಳ :ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರ ಲೋಕ ಸೇವಾ ಬಂಧು ಸಹಯೋಗದಲ್ಲಿ ಬಿ ಸಿ ರೋಡ್ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಫೆಬ್ರವರಿ 19 ರವರೆಗೆ ನಡೆಯಲಿರುವ ಚಿಣ್ಣರೋತ್ಸವ 2023 ಕಾರ್ಯಕ್ರಮ ಶನಿವಾರ ಸಂಜೆ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಚಿಣ್ಣರ ಲೋಕ ಸೇವಾ ಬಂಧು ನಿರ್ದೇಶಕ ತಾರನಾಥ ಕೊಟ್ಟಾರಿ ಮಾತನಾಡಿ ಈ ಉತ್ಸವವು ಮಕ್ಕಳ ಪ್ರತಿಭೆಗೆ ಅವಕಾಶ ಮಾಡಿಕೊಡುವ ಮೂಲಕ ಚಿಣ್ಣರ ಲೋಕ ಸಂಸ್ಥೆಯು ಉತ್ತಮ ಕಾರ್ಯ ಮಾಡುತ್ತಿದ್ದು, ಪ್ರತಿ ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕ ವೇದಿಕೆ ಕೊಡುವ ಕಾರ್ಯಕ್ರಮ ಮಾಡಿದೆ ಎಂದು ಹೇಳಿ ಶುಭ ಹಾರೈಸಿದರು.
ಸಂಸ್ಥೆ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು ಪ್ರಸ್ತಾವಿಕವಾಗಿ ಮಾತನಾಡಿ,ನರಿಕೊಂಬು ಗ್ರಾಮದ ಬೋಳಂತೂರು ಸರಕಾರಿ ಶಾಲೆಯ ದತ್ತು ಯೋಜನೆ ಹಾಗೂ ನಿರಾಶ್ರಿತರ ಸೇವಾಶ್ರಮದ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿದ ಚಿಣ್ಣರ ಅಧ್ಯಕ್ಷೆ
ಸಾನ್ವಿ ಶೆಟ್ಟಿ ಅವರು ಮಕ್ಕಳ ಬಾಲ್ಯದ ಈ ಓದಿನ ಒತ್ತಡ ನಿವಾರಣೆ ದೃಷ್ಟಿಯಿಂದ ಇಂತಹ ಮಾನಸಿವಾಗಿ ಉತ್ತೆಜಿಸುವ ಉತ್ಸಾಹಗಳು ಭವಿಷ್ಯದ ದೃಷ್ಟಿಯಿಂದ ಸಹಕಾರಿಯಾಗಲಿದೆ ಎಂದರು.
ವೇದಿಕೆಯಲ್ಲಿ ಹೋಟೆಲ್ ಉದ್ಯಮಿ ಹಂಝ ಬಸ್ತಿಕೊಡಿ, ಕರಾವಳಿ ಕಲೋತ್ಸವದ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆ,ಬೆಂಗಳೂರು ಕ್ರಿಯೇಟಿವ್ ಕಾರ್ನರ್ ಅಮ್ಮ್ಯೂಮೆಂಟ್ ನ ಮಾಲಕ ಪ್ರಸಾದ್ ವಿ ಬೆಂಗಳೂರು, ಟ್ರಸ್ಟ್ ನಿರ್ದೇಶಕರಾದ ರಾಜ ಚಂಡ್ತಿಮಾರ್, ಇಬ್ರಾಹಿಂ ಕೈಲಾರ್,ನವೀನ್ ಕುಮಾರ್, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಮ್ಯಾನೇಜರ್ ಪ್ರದೀಪ್ ಕುಮಾರ್ ರಾವ್,ನ್ಯಾಯವಾದಿ ಜಯರಾಮ್ ಮೊದಲದವರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕಿ ಸೌಮ್ಯ ಭಂಡಾರಿಬೆಟ್ಟು ವಂದಿಸಿದರು ಶ್ರೀನಿಧಿ ಬಿಸಿ ರೋಡು ಕಾರ್ಯಕ್ರಮ ನಿರೂಪಿಸಿದರು.















