Coastal Bulletin

ರಾಮನಗರ: ಕಾಂಗ್ರೆಸ್ ನಡೆಸುತ್ತಿರುವ ನಮ್ಮ ನೀರು ನಮ್ಮ ಹಕ್ಕು ಪಾದಾಯಾತ್ರೆಯು ಹೈಕೋರ್ಟ್ ಛೀಮಾರಿ ಹಾಕಿದ ಮೇಲೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಮೇರೆಗೆ ಇಂದು ಸ್ಥಗಿತಗೊಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

ಗುರುವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿ, ಪಾದಯಾತ್ರೆಯನ್ನು ಮೊಟಕುಗೊಳಿಸುವ ಚರ್ಚೆ ನಡೆಯಿತು.ಈ ಕುರಿತು ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿಗೆ ಮಾಹಿತಿ ನೀಡಲಿದ್ದಾರೆ.

ಜನವರಿ9ರಿಂದ ಮೇಕೆದಾಟುವಿನಿಂದ ಪಾದಾಯಾತ್ರೆ ಶುರುವಾಗಿದೆ.ಗುರುವಾರ ರಾಮನಗರದಿಂದ ಬಿಡದಿ ತನಕ ಪಾದಯತ್ರೆ

ನಡೆಯಬೇಕಿತ್ತು.ಆದರೆ ಬುಧವಾರ ರಾತ್ರಿಯೇ ಕರ್ನಾಟಕ ಸರ್ಕಾರ ಪಾದಾಯಾತ್ರೆ ನಿಲ್ಲಿಸಲು ಆದೇಶ ಹೊರಡಿಸಿತ್ತು. ರಾಮನಗರ ಪೊಲೀಸರು ಪಾದಯಾತ್ರೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದರು.

ಕೋವಿಡ್ ಪರಿಸ್ಥಿತಿ ಸರಿಯಾದ ಬಳಿಕ ಮತ್ತೆ ಮೇಕೆದಾಟು ಪಾದಯಾತ್ರೆ ಯಾತ್ರೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

Leave a Comment