ಬಂಟ್ವಾಳ: ತಾಲೂಕಿನ ಪುದು ಗ್ರಾಮದ ಗೋವಿಂತೋಟದಲ್ಲಿರುವ ರಾಧ ಸುರಭಿ ಗೋಮಂದಿರದಲ್ಲಿ 12 ಬಗೆಯ ಗಿಡಮೂಲಿಕೆಗಳು , ಗೋವಿನ ಹಾಲಿನ ಅರ್ಕ ಮತ್ತಿತರ ಉತ್ಪನ್ನಗಳನ್ನು ಸೇರಿಸಿ ತಯಾರಿಸಿದ "ಕುಕುಬಾ " ಹೆಸರಿನ ಆರೋಗ್ಯ ವರ್ಧಿತ ತಂಪು ಪಾನಿಯವನ್ನು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಶ್ರೀ ಸಿದ್ಧರೂಡ ಮಿಷನ್ ನ ಅಧ್ಯಕ್ಷ ಡಾ. ಆರೂಢ ಭಾರತೀ ಸ್ವಾಮೀಜಿ ತಂಪು ಪಾನೀಯ ಬಿಡುಗಡೆಗೊಳಿಸಿದದರು.
ಸುಳ್ಯ ಮರ್ಕಂಜದ ಅನ್ನಪೂರ್ಣೇಶ್ವರೀ ಕ್ಷೇತ್ರ ಯೋಗೀಶ್ವರ ಸಿದ್ಧ ಮಠದ ಧರ್ಮದರ್ಶಿ ರಾಜೇಶ್ ನಾಥ್ ಜಿ ಮಾತನಾಡಿ ಗೋಶಾಲೆಗಳನ್ನು ನಿರ್ಮಾಣ ಮಾಡಿ ಆ ಮೂಲಕ ಗೋವುಗಳನ್ನು ಸಂರಕ್ಷಣೆ ಮಾಡಿ, ದೇಶಾದ್ಯಂತ ಗೋವಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ರಾಧ ಸುರಭೀ ಗೋ ಮಂದಿರದ ವತಿಯಿಂದ ಜನರ ಆರೋಗ್ಯ ವರ್ಧನೆ ಮಾಡುವ ಪಾನೀಯ ಬಿಡುಗಡೆಗೊಂಡಿರುವುದು ಅಭಿನಂದನೀಯ ಎಂದರು.
ರಾಧ ಸುರಭಿ ಗೋ ಮಂದಿರದ ಅಧ್ಯಕ್ಷ ಭಕ್ತಿ ಭುಷಣ್ ಜಿ ಮಾತನಾಡಿ ಇಂದು ಮಾರುಕಟ್ಟೆಯಲ್ಲಿರುವ ರಾಸಾಯನಿಕ
ಮಿಶ್ರಿತ ಪಾನಿಯಗಳನ್ನು ಸೇವಿಸಿ ರೋಗ ರುಜಿನವನ್ನು ಆಹ್ವಾನಿಸಿಕೊಳ್ಳುತ್ತಾರೆ. ಅದಕ್ಕೆ ಪರ್ಯಾಯವಾಗಿ ಹಿಮಾಲಯದಲ್ಲಿ ಸಿಗುವ ಗಿಡಮೂಲಿಕೆಗಳು ಸೇರಿ ಒಟ್ಟು15 ಬಗೆಯ ಉತ್ಪನ್ನಗಳನ್ನು ಸೇರಿಸಿ ಆರೋಗ್ಯ ವರ್ಧಿತ ಪಾನಿಯವನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್, ಕರ್ನಾಟಕ ಪ್ರಾಂತ ಗೋ ಸೇವಾ ಗತಿವಿಧಿ ಸಂಯೋಜಕ ಪ್ರವೀಣ್ ಸರಳಾಯ, ಮಂಗಳೂರು ವಿಭಾಗ ಬಾಲಗೋಕುಲ ಟೋಲಿ ಸದಸ್ಯ ದಾಮೋದರ ನೆತ್ತರಕೆರೆ, ಸಾಮಾಜಿಕ ಕಾರ್ಯಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ, ಗ್ರಾಮ ವಿಕಾಸ ಸಂಯೋಜಕ ಮನೋಹರ ಕಂಜತ್ತೂರು,ಜೀವ ವಿಮಾ ಪ್ರತಿನಿಧಿ ನವೀನ್ ಕೊಡ್ಮಾಣ್ ಚಾಪೆ ಮತ್ತಿತರರು ಉಪಸ್ಥಿತರಿದ್ದರು.










