ಬಂಟ್ವಾಳ: ಕಳೆದ 9ವರುಷಗಳಿಂದ ಸಾಮಾಜಿಕ,ಶೈಕ್ಷಣಿಕ ,ಆರೋಗ್ಯ,ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಮಾಡುತ್ತಿರುವ ಎಸ್ ಆರ್ ಹಿಂದೂ ಫ್ರೆಂಡ್ಸ್ ಪೊಳಲಿ ಸಂಸ್ಥೆಯ ದಶಮಾನೋತ್ಸವ ಸಮಾರಂಭವು ಫೆ.15ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸರ್ವಮಂಗಳ ಹಾಲ್ ನಲ್ಲಿ ಡಿ. 11ರಂದು ಬುಧವಾರ ಬಿಡುಗಡೆಗೊಂಡಿತು.
ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ದಶಮಾನೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅರ್ಚಕ ನಾರಾಯಣ ಭಟ್ ದೀಪಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ್ ನಾವಡ ಪೊಳಲಿ,ಸುಬ್ರಾಯ ಕಾರಂತ,ವಿಘೇಶ್ ಭಟ್ ,ಮೋಹನ್‌ದಾಸ್ ಪೊಳಲಿ,ಸಂತೋಷ್ ಶೆಟ್ಟಿ ಪೊಳಲಿ, ಕೇಶವ ಪೊಳಲಿ, ಧರ್ಮಜ್ಯೋತಿ ಫ್ರೆಂಡ್ಸ್ ಇದರ ಅಧ್ಯಕ್ಷ
ಸೂರಜ್ ಕಲ್ಕುಟ, ಯಶವಂತ ಕೋಟ್ಯಾನ್ ಪೊಳಲಿ , ನಿವೃತ ಯೋಧ ಅನೀಶ್ ಆಚಾರ್ಯ, ನಾರಾಯಣ ಪೂಜಾರಿ ಪೊಳಲಿ,
ಎಸ್ ಆರ್ ಹಿಂದೂ ಫ್ರೆಂಡ್ಸ್ ಇದರ ಅಧ್ಯಕ್ಷ ಅಜಿತ್ ಪೊಳಲಿ,ಉದಯ ಪೂಜಾರಿ, ಕೃಷ್ಣಪ್ಪ ದೇವಾಡಿಗ, ಶಿವಪ್ರಸಾದ್ ಶೆಟ್ಟಿ ಹಾಗೂ ಎಸ್ ಅರ್ ಹಿಂದೂ ಫ್ರೆಂಡ್ಸ ಇದರ ಸದಸ್ಯರು ಉಪಸ್ಥಿತರಿದ್ದರು. ಸಂಘಟಕ ಬಿ.ಜನಾರ್ಧನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.















