ಬಂಟ್ವಾಳ :ವಿವೇಕ ಜಾಗ್ರತ ಬಳಗ, ಬಂಟ್ವಾಳ ನರಿಕೊಂಬು ವಿವೇಕ ಕಿರಣ ಮಂದಿರದ 16ನೇ ವರ್ಧಂತ್ಯುತ್ಸವದ ಪ್ರಯುಕ್ತ ಡಿ.15 ರಿಂದ ಡಿ. 21 ರವರೆಗೆ ಪ್ರತೀ ದಿನ ಸಂಜೆ ಗಂಟೆ 5.00 ರಿಂದ 7.30 ರವರೆಗೆ ವೇದಮೂರ್ತಿ ವಿದ್ವಾನ್ ಶ್ರೀ ಕೃಷ್ಣರಾಜ ಭಟ್ ಕುತ್ಪಾಡಿ, ಉಡುಪಿ ಇವರಿಂದ ಶ್ರೀ ವೇದವ್ಯಾಸ ಮುನಿ ಪ್ರಣೀತ ಶ್ರೀ ಪದ್ಮಮಹಾಪುರಾಣ ಪ್ರವಚನ ಸಪ್ತಾಹ ನಡೆಯಲಿದೆ.
ಸಮಾರಂಭದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ಶ್ರೀ ನಾರಾಯಣ ಭಟ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಯಾಗಿ ಉಡುಪಿ ಪ್ರಖ್ಯಾತ ಪ್ರವಚನಗಾರರು ಮತ್ತು ಜ್ಯೋತಿಷಿಗಳು ಕುತ್ಪಾಡಿ ವೇದಮೂರ್ತಿ ವಿದ್ವಾನ್ ಶ್ರೀ ಶ್ರೀನಿವಾಸ ಭಟ್ ಭಾಗವಹಿಸಲಿದ್ದಾರೆ.
ಡಿ. 22ರಂದು ಸಂಜೆ 3.30 ರಿಂದ 5.00 ರವರೆಗೆ ಶ್ರೀ ದುರ್ಗಾಕೃಪಾಂಬುಧಿ ಎಂಬ ವಿಶಿಷ್ಟ ಸಾಮೂಹಿಕ ದುರ್ಗಾ ಪೂಜೆ ಕಡಂದಲೆ ವೇದಮೂರ್ತಿ ವಿದ್ವಾನ್ ಶ್ರೀ ಸ್ಕಂದ ಪ್ರಸಾದ್ ಭಟ್ ಪೌರೋಹಿತ್ಯ ದಲ್ಲಿ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದ
ಉದ್ಘಾಟನೆಯನ್ನು ಮಾಣಿಲ ಶ್ರೀ ಕ್ಷೇತ್ರ ಕುಕ್ಕಾಜೆಯ ಶ್ರೀ ಕಾಳಿಕಾಂಬಾ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿಗಳು ಪೂಜ್ಯ ಶ್ರೀ ಕೃಷ್ಣ ಗುರೂಜೀ,ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಪ್ರಧಾನ ಅರ್ಚಕರು, ವೇದಮೂರ್ತಿ ವಿದ್ವಾನ್ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣರು, ಮುಖ್ಯ ಅತಿಥಿಯಾಗಿ ಪ್ರಖ್ಯಾತ ಪ್ರವಚನಗಾರರು ಮತ್ತು ಬೆಂಗಳೂರು ಪೂರ್ಣ ಪ್ರಜ್ಞಾ ವಿದ್ಯಾಪೀಠದ ಪ್ರಧ್ಯಾಪಕರು ವಿದ್ವಾನ್ ಶ್ರೀ ಕೃಷ್ಣರಾಜ ಭಟ್, ಕುತ್ಪಾಡಿ ಭಾಗವಹಿಸಲಿದ್ದಾರೆ ಹಾಗೂ ಸಾಂಸ್ಕೃತಿಕ ವೈಭವ ಹಾಗೂ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.















