ಬಂಟ್ವಾಳ:ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಪುನರಾಯ್ಕೆ. 8ನೇ ಮಹಾಸಭೆ ಮತ್ತು ರಕ್ತದಾನ ಶಿಬಿರ.

Coastal Bulletin
ಬಂಟ್ವಾಳ:ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಪುನರಾಯ್ಕೆ. 8ನೇ ಮಹಾಸಭೆ ಮತ್ತು ರಕ್ತದಾನ ಶಿಬಿರ.

ಬಂಟ್ವಾಳ :ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ರಿ. ಬಂಟ್ವಾಳ ತಾಲೂಕು ಇದರ 8ನೇ ಮಹಾಸಭೆ ಮತ್ತು ರಕ್ತದಾನ ಶಿಬಿರವು ಆ. 11ರಂದು ಲಯನ್ಸ್ ಕ್ಲಬ್ ಬಿ. ಸಿ ರೋಡ್ ನಲ್ಲಿ ನಡೆಯಿತು.

ಇದರಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ರಿ. ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾಗಿ ಧನ್ ರಾಜ್ ಶೆಟ್ಟಿ ಮರು ಆಯ್ಕೆಯಾಗಿದ್ದಾರೆ , ಕಾರ್ಯದರ್ಶಿಯಾಗಿ ಮರು ಆಯ್ಕೆ ಸಂತೋಷ್ ಸುವರ್ಣ ಕುರಿಯಾಳ, ನೂತನ ಕೋಶಧಿಕಾರಿಯಾಗಿ ಪ್ರಶಾಂತ್ ಕುಂಡಡ್ಕ ಅವರನ್ನು ನೇಮಕ ಮಾಡಲಾಯಿತು. 

ಕಾರ್ಯಕ್ರಮ ಧನಜಯ ಶೆಟ್ಟಿ

ಸರಪಾಡಿ ಸ್ವಾಗತಿಸಿದರು. ಸಭೆಯಲ್ಲಿ ಧ್ವನಿವರ್ದಕ ಮತ್ತು ದೀಪಾಲಂಕಾರಕ್ಕೆ ಮಾಲಕರ ಜಿಲ್ಲಾ ಸಂಘದ ಅಧ್ಯಕ್ಷರು ರಾಜಶೇಖರ್ ಶೆಟ್ಟಿ ಕುಡ್ತಮುಗೇರು, ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ದ. ಕ ಜಿಲ್ಲಾ ಸಂಘದ ಕಾರ್ಯದರ್ಶಿ ಬೆನೆಟ್ ಡಿಸಿಲ್ವ, ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ರಿ. ಬಂಟ್ವಾಳ ತಾಲೂಕಿನ ಸ್ಥಾಪಕ ಅಧ್ಯಕ್ಷ ರವಿವರ್ಮ ವಿಟ್ಲ ಇವರು ಉಪಸ್ಥಿತರಿದ್ದರು. ಲೋಹಿತ್ ಬ್ರಹ್ಮರ ಕೊಟ್ಲು ಧನ್ಯವಾದವಿತ್ತರು

Leave a Comment