ನೆತ್ತರಕೆರೆ :ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ "ಅಟಿಡೊಂಜಿ ಗಮ್ಮತ್" ಕಾರ್ಯಕ್ರಮ.

Coastal Bulletin
ನೆತ್ತರಕೆರೆ :ನೇತ್ರಾವತಿ ಮಾತೃ ಮಂಡಳಿ ಅಶ್ರಯದಲ್ಲಿ "ಅಟಿಡೊಂಜಿ ಗಮ್ಮತ್" ಕಾರ್ಯಕ್ರಮ.

ಬಂಟ್ವಾಳ :ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಅಶ್ರಯದಲ್ಲಿ ತುಳು ಪರಂಪರೆ ಹಾಗೂ ಸಂಸ್ಕೃತಿಯನ್ನು ನೆನಪಿಸುವ "ಅಟಿಡೊಂಜಿ ಗಮ್ಮತ್" ಕಾರ್ಯಕ್ರಮವು ಆ 11ರಂದು ಆದಿತ್ಯವಾರ ನೆತ್ತರಕೆರೆ ವಸಂತಿ ವಿಠಲ ಶೆಟ್ಟಿ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಭಾರತ ಮಾತೆಗೆ ದೀಪ ಬೆಳಗಿಸಿ ಬತ್ತ ತುಂಬಿದ ಕಳಸೆಯಲ್ಲಿ ತೆಂಗಿನ ಹೂ ಅರಳಿಸುವ ಮೂಲಕ ಉದ್ಘಾಟಸಲಾಯಿತು.

ಕಾರ್ಯಕ್ರಮಕ್ಕೆ ರಾಧ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಮಹಿಳಾ ಶಕ್ತಿ ಪ್ರಮುಖ್ ಸೌಮ್ಯ ರಾಣಿ, ಪ್ರೀತಿ ಸುರೇಶ ನೆತ್ತರಕೆರೆ, ಮಾತೃ ಮಂಡಳಿಯ ಸಂಚಾಲಕಿ ಲಲಿತ ಸುಂದರ್,ಅಧ್ಯಕ್ಷೆ ಮಾಲತಿ

ಚಂದ್ರಹಾಸ, ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಸಂತೋಷ ಕುಮಾರ್, ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ಸಂಚಾಲಕ ದಾಮೋದರ ನೆತ್ತರಕೆರೆ ಮಾಜಿ ಅಧ್ಯಕ್ಷ ಸುರೇಶ ಭಂಡಾರಿ ಅರ್ಬಿ ಮತ್ತಿತರರು ಉಪಸ್ಥಿತರಿದ್ದರು.

ತುಳುನಾಡಿನ ಆಚಾರ ವಿಚಾರ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ಪರ್ಧೆಗಳು ನಡೆಯಿತು.ಮದ್ಯಾಹ್ನ ಮಾತೃ ಮಂಡಳಿಯ ಸದಸ್ಯೆಯರು ಮನೆಯಲ್ಲಿ ತಯಾರಿಸಿ ತಂದ 45ಕ್ಕೂ ಅಧಿಕ ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳೊಂದಿಗೆ ಸಹಭೋಜನ ನಡೆಯಿತು.

Leave a Comment