ಪ್ಯಾರಿಸ್‌ ಒಲಿಂಪಿಕ್ಸ್ 2024 ಗೆ ವರ್ಣರಂಜಿತ ತೆರೆ.

Coastal Bulletin
ಪ್ಯಾರಿಸ್‌ ಒಲಿಂಪಿಕ್ಸ್ 2024 ಗೆ ವರ್ಣರಂಜಿತ ತೆರೆ.

ಜುಲೈ 26 ರಂದು ಶುರುವಾದ 33ನೇ ಬೇಸಿಗೆ ಒಲಿಂಪಿಕ್ಸ್​ಗೆ ಭಾನುವಾರ ಫ್ರಾನ್ಸ್​ನ ರಾಜಧಾನಿ ಪ್ಯಾರಿಸ್​ನಲ್ಲಿ ತೆರೆಬಿದ್ದಿದೆ. ಪ್ಯಾರಿಸ್‌ನ ಸ್ಟೇಡ್ ಡೆ ಫ್ರಾನ್ಸ್‌ನಲ್ಲಿ ನಡೆದ ವರ್ಣರಂಜಿತ ಸಮಾರಂಭದ ನಂತರ, 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಲಾಸ್ ಏಜಂಲೀಸ್​ಗೆ ಆಯೋಜನೆಯ ಹಕ್ಕನ್ನು ಹಸ್ತಾಂತರಿಸಲಾಯಿತು. ಈ ಭವ್ಯವಾದ ಕಾರ್ಯಕ್ರಮವನ್ನು ಮಾನವೀಯತೆಯ ಆಚರಣೆ ಎಂದು ಕರೆಯಲಾಗಿರುವುದು ವಿಶೇಷ. ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 9000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಹಾಗೆಯೇ ಅವರನ್ನು 270 ಪ್ರದರ್ಶಕರು ಮತ್ತು ಕಲಾವಿದರು ರಂಜಿಸಿರುವುದು ವಿಶೇಷ

ಪ್ಯಾರಿಸ್ ಕ್ರೀಡಾಕೂಟದಲ್ಲಿ ನಾಲ್ಕು ಚಿನ್ನ ಮತ್ತು ಕಂಚು ಗೆದ್ದ ಫ್ರೆಂಚ್ ಈಜು ಸೆನ್ಸೇಷನ್ ಲಿಯಾನ್ ಮಾರ್ಚಂಡ್, ಕೌಲ್ಡ್ರನ್ ಅನ್ನು ನಂದಿಸಿ ಮತ್ತು ಒಲಿಂಪಿಕ್ ಜ್ವಾಲೆಯೊಂದಿಗೆ ಲ್ಯಾಂಟರ್ನ್ ಅನ್ನು ಕ್ರೀಡಾಂಗಣಕ್ಕೆ ಒಯ್ಯುವುದರೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಫ್ರೆಂಚ್ ರಗ್ಬಿ ತಾರೆ ಆಂಟೊಯಿನ್ ಡುಪಾಂಟ್ ನೇತೃತ್ವದ 205 ದೇಶಗಳ ಪ್ರತಿ ಧ್ವಜಧಾರಿಗಳು ಪರೇಡ್ ಆಫ್ ದಿ ನೇಷನ್​ನಲ್ಲಿ ಭಾಗವಹಿಸಿದ್ದರು

ಪ್ಯಾರಿಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಶೂಟರ್ ಮನು ಭಾಕರ್ ಹಾಗೂ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಕಾಣಿಸಿಕೊಂಡಿದ್ದರು

6 ಪದಕಗಳೊಂದಿಗೆ ಅಭಿಯಾನ ಅಂತ್ಯ:

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 6 ಪದಕಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಈ ಮೂಲಕ ಪದಕ

ಪಟ್ಟಿಯಲ್ಲಿ 71ನೇ ಸ್ಥಾನ ಪಡೆದುಕೊಂಡಿದೆ. ಭಾರತದ ಪರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಕ್ರೀಡಾಳುಗಳ ಪಟ್ಟಿ ಈ ಕೆಳಗಿನಂತಿದೆ…

ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಕಂಚು

ಮನು ಭಾಕರ್, ಸರಬ್ಜೋತ್ ಸಿಂಗ್: 10 ಮೀ ಏರ್ ಪಿಸ್ತೂಲ್ (ಮಿಶ್ರ ತಂಡ)- ಕಂಚು

ಸ್ವಪ್ನಿಲ್ ಕುಸಾಲೆ: 50 ಮೀ ರೈಫಲ್ 3 ಸ್ಥಾನ- ಕಂಚು

ಟೀಮ್ ಇಂಡಿಯಾ: ಪುರುಷರ ಹಾಕಿ- ಕಂಚು

ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ- ಬೆಳ್ಳಿ

ಅಮನ್ ಸೆಹ್ರಾವತ್: ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ- ಕಂಚು

ಪದಕ ಪಟ್ಟಿಯಲ್ಲಿ ಅಮೇರಿಕಾಗೆ ಅಗ್ರಸ್ಥಾನ, ಸಾಂಪ್ರದಾಯಿಕ ಎದುರಾಳಿ ಚೀನಾಗೆ ದ್ವಿತೀಯ ಸ್ಥಾನ ಲಭಿಸಿದರೆ ಭಾರತ 71 ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

Leave a Comment