ಬಿ ಸಿ ರೋಡ್:ಮೋಟೊ ಕ್ರಾಸ್ 2026" ಬೈಕ್ ರೇಸ್ ಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

Coastal Bulletin
ಬಿ ಸಿ ರೋಡ್:ಮೋಟೊ ಕ್ರಾಸ್ 2026" ಬೈಕ್ ರೇಸ್ ಗೆ ಶಾಸಕ ರಾಜೇಶ್ ನಾಯ್ಕ್ ಚಾಲನೆ

ಬಂಟ್ವಾಳ :ಟೀಮ್ ಸತ್ಯಜಿತ್ ಸುರತ್ಕಲ್ ಇದರ  ಆಶ್ರಯದಲ್ಲಿಎ.12ರಂದು ಆದಿತ್ಯವಾರ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆದ "ಮೋಟೊ ಕ್ರಾಸ್ 2026" ಬೈಕ್ ರೇಸ್ ಕಾರ್ಯಕ್ರಮಕ್ಕೆ  ಬಂಟ್ವಾಳ ಶಾಸಕ ರಾಜೇಶ್ಎ ನಾಯ್ಕ್ ಚಾಲನೆ ನೀಡಿದರು.


ಬಳಿಕ ಮಾತನಾಡಿ ಬೈಕ್ ರೇಸ್ ಮೂಲಕ ಯುವಕರಿಗೆ ಧೈರ್ಯ ಹಾಗೂ ಆತ್ಮವಿಶ್ವಾಸ ಮೂಡುವ ಕೆಲಸವನ್ನು ಟೀಮ್ ಸತ್ಯಜಿತ್ ತಂಡ ಮಾಡುತ್ತಿದೆ ಮುಂದೆಯೂ ಇವರಿಂದ ಒಳ್ಳೆಯ ಕೆಲಸಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ವಕೀಲೆ ಶೈಲಜಾ

ರಾಜೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್, ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಚಂದ್ರ ಶೇಖರ್ ಭಂಡಾರಿ, ಹಿಂದೂ ಮುಖಂಡ ರವಿರಾಜ್ ಬಿ ಸಿ ರೋಡ್, ಶರ್ಮಿಳಾ ಅನಂತ್ ಪೊಳಲಿ, ಹಿಂದೂ ಮುಖಂಡ ಸಂತೋಷ್ ಪೊಳಲಿ,ಟೀಮ್ ಸತ್ಯಜಿತ್ ಸಂಘಟನೆಯ ಅಧ್ಯಕ್ಷ ಜಗದೀಶ್ ನೆತ್ತರಕೆರೆ, ಗುರುರಾಜ್ ಬಂಟ್ವಾಳ ಉಪಸ್ಥಿತರಿದ್ದರು.

ಹರ್ಷಿತ್ ಪಲ್ಲಮಜಲು ಸ್ವಾಗತಿಸಿ,ರಾಜೀವ ಕಕ್ಕೆ ಪದವು ಕಾರ್ಯಕ್ರಮ ನಿರೂಪಿಸಿದರು.

Leave a Comment