ಬಂಟ್ವಾಳ :ರಾಜೇಶ್ವರಿ ಎಜುಕೇಶನ್ ಫೌಂಡೇಶನ್ (ರಿ)ಇದರ ಅಶ್ರಯದಲ್ಲಿ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಪಿಯು ಕಾಲೇಜಿನ ಉದ್ಘಾಟನಾ ಸಮಾರಂಭವು ಎ 13ರಂದು ಭಾನುವಾರ ಪಟೇಲ್ ಮುದ್ದಣ್ಣ ಶೆಟ್ಟಿ ಕ್ಯಾಂಪಸ್ ರಾಧಾ ಫಾರ್ಮ್ಸ್, ಸಾಣೂರು ಕಾರ್ಕಳ ಇಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಅದಮಾರು ಮಠ, ಆಶೀರ್ವಚನ ನೀಡಲಿದ್ದು,ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ
ಮುಖ್ಯ ಅತಿಥಿಗಳಾಗಿ ಡಾ. ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಎಜುಕೇಶನ್ ಫೌಂಡೇಶನ್, ಮೂಡಬಿದ್ರೆ,ಗುರ್ಮೆ ಸುರೇಶ್ ಶೆಟ್ಟಿ, ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ, ಜಯಶ್ರೀ ಅಮರನಾಥ್ ಶೆಟ್ಟಿ, ಮೂಡಬಿದ್ರೆ, ಕೆ. ಶ್ರೀಪತಿ ಭಟ್, ಮಾಲಕರು, ಧನಲಕ್ಷ್ಮೀ ಎಕ್ಸ್‌ಪೋರ್ಟ್ಸ್, ಮೂಡಬಿದ್ರೆ,ಡಾ. ಸುಧಾಕರ ಶೆಟ್ಟಿ,
ಅಧ್ಯಕ್ಷರು, ಜ್ಞಾನಸುಧಾ ವಿದ್ಯಾ ಸಂಸ್ಥೆಗಳು, ಇಂದ್ರಾಳಿ ಜಯಕರ ಶೆಟ್ಟಿ, ಅಧ್ಯಕ್ಷರು, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್, ಉಡುಪಿ,ಜಿ. ರಾಮಕೃಷ್ಣ ಆಚಾರ್, ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿ., ಮೂಡಬಿದ್ರೆ,ಯುವರಾಜ್ ಜೈನ್, ಅಧ್ಯಕ್ಷರು, ಸಾಣೂರು ಗ್ರಾಮ ಪಂಚಾಯತ್,ಮಂಜುನಾಥ ನಾಯಕ್, ಮಾಲಕರು, ಸಚಿನ್ ಎಂಟರ್‌ಪ್ರೈಸಸ್, ಪುತ್ತೂರು ಉಪಸ್ಥಿತರಿರುವರು ಎಂದು ರಾಜೇಶ್ವರಿ ಎಜುಕೇಶನ್ ಫೌಂಡೇಶನ್ (ರಿ) ಆಡಳಿತ ಮಂಡಳಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.














