Coastal Bulletin

ಬಂಟ್ವಾಳ: ಕಳ್ಳಿಗೆ, ತುಂಬೆ, ಬಿಮೂಡ ನಡು ಗ್ರಾಮಸ್ಥರ ಆರಾಧ್ಯ ದೈವ ಶ್ರೀ ಕನಪಾಡಿತ್ತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಮಾರ್ಚ್ 12ರಿಂದ 18ರವರೆಗೆ ನಡೆಯಲಿದೆ. ಮಾರ್ಚ್ 12, ಶನಿವಾರ ಬೆಳಿಗ್ಗೆ 9 ಗಂಟೆಗೆ ಕೋಳಿಗುಂಟ, ಸಂಜೆ ಪ್ರಥಮ ಚೆಂಡು ನಡೆಯಲಿದೆ

ಭಾನುವಾರ ದ್ವಿತೀಯ, ಸೋಮವಾರ ತೃತೀಯ ಚೆಂಡು ನಡೆಯಲಿದೆ. ಮಾರ್ಚ್ 14ರಂದು ಅಲೆತ್ತೂರು ಭಂಡಾರ ಮನೆಯಿಂದ ಪಂಜುರ್ಲಿ, ಪಲ್ಲಮಜಲು ಭಂಡಾರ ಮನೆಯಿಂದ ಧೂಮಾವತಿ, ಬಂಟ ಹಾಗೂ ಕಂಜತ್ತೂರಿನಿಂದ ಜುಂಬುರ್ಲಿ ದೈವಗಳು ಪೆರಿಯೋಡಿ ಬೀಡುವಿಗೆ ಆಗಮಿಸಿ ಅಲ್ಲಿಂದ ಭಂಡಾರ ಮೆರವಣಿಗೆ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರಿಗೆ ರಂಗಪೂಜೆ ಸಲ್ಲಿಸಿ ಬಳಿಕ ಕನಪಾಡಿ ಮಾಡಕ್ಕೆ ತೆರಳುವುದು.

ಮರುದಿನ ಬೆಳಿಗ್ಗೆ

ಉತ್ಸವಕ್ಕೆ ಧ್ವಜಾರೋಹಣ ನೆರವೇರಲಿದೆ. ಮಾರ್ಚ್ 15 ಮತ್ತು 16ರಂದು ಶ್ರೀ ಕನಪಾಡಿತ್ತಾಯ ಪಾಪೆಬಂಡಿ ನೇಮೋತ್ಸವ, ಕೆರೆನೇಮ ನೆರವೇರಲಿದೆ. 15ರಂದು ಕಂಚಿಲ್ ಸೇವೆ ವಿಶೇಷ. ಮಾರ್ಚ್ 17ರಂದು ಧೂಮಾವತಿ ಬಂಟ, ಪರಿವಾರ ದೈವಗಳ ನೇಮೋತ್ಸವ, ಮಾರ್ಚ್ 18ರಂದು ಸಂಜೆ ಪಿಲಿಚಾಮುಂಡಿ ನೇಮೋತ್ಸವ ಬಳಿಕ ಧ್ವಜಾವರೋಹಣಗೊಂಡು ದೈವಗಳು ಭಂಡಾರ ಮೆರವಣಿಗೆಯೊಂದಿಗೆ ಭಂಡಾರ ಮನೆಗೆ ತೆರಳಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment