ತುಂಬೆ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ. ಈ ಜಗತ್ತು ಭಗವಂತನ ಸಾಮ್ರಾಜ್ಯ, ಪ್ರೀತಿ ಗೌರವಗಳೊಂದಿಗೆ ಬಾಳೋಣ :ಮಾಣಿಲ ಶ್ರೀ

Coastal Bulletin
ತುಂಬೆ :ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ. ಈ ಜಗತ್ತು ಭಗವಂತನ ಸಾಮ್ರಾಜ್ಯ, ಪ್ರೀತಿ ಗೌರವಗಳೊಂದಿಗೆ ಬಾಳೋಣ :ಮಾಣಿಲ ಶ್ರೀ

ಬಂಟ್ವಾಳ :ಈ ಜಗತ್ತು ಭಗವಂತನ ಸಾಮ್ರಾಜ್ಯ,ಅವನ ಅನುಗ್ರಹವಿಲ್ಲದೆ ಯಾವ ಕಾರ್ಯವು ನಡೆಯದು, ಮನುಷ್ಯ ದ್ವೇಷ,ಅಸೂಯೆ,ಸ್ವಾರ್ಥ ಬಿಟ್ಟು ನಿಷ್ಕಲ್ಮಶ ಮನಸ್ಸಿನಿಂದ ಭಗವಂತನ ಸ್ಮರಣೆ ಮಾಡಿದರೆ ನಮ್ಮ ಪ್ರಾರ್ಥನೆ ಈಡೇರುತ್ತದೆ,ಎಲ್ಲರನ್ನು ಪ್ರೀತಿಸಿ ಗೌರವಿಸುವ ಗುಣ ಬೆಳೆಸೋಣ, ದೇವರ ಸ್ಮರಣೆ,ಶ್ಲೋಕ, ಮಂತ್ರ ಪಠಣ, ಹರಿನಾಮ ಸಂಕೀರ್ತನೆಯಿಂದ ನಮ್ಮಲಿರುವ ಋಣತ್ಮಕ ಅಂಶಗಳು ದೂರವಾಗುತ್ತದೆ.ರಾಜರಸ್ತೆಯ ಹಾಗೂ ನೇತ್ರಾವತಿ ನದಿ ತಟದ ಸಮೀಪದಲ್ಲಿರುವ ಮಹಾಲಿಂಗೇಶ್ವರನ ಸಾನಿಧ್ಯ ಇನ್ನು ಹೆಚ್ಚಿನ ಚಾರಿತ್ರ್ಯ ಹಾಗೂ ಪ್ರಭಾವದಿಂದ ಬೆಳಗಲಿದೆ ಸೂರ್ಯ ಚಂದ್ರರ ಕಾಲಕ್ಕೋ ಎಲ್ಲರಿಗೂ ಮಹಾಲಿಂಗೇಶ್ವರನ ಅನುಗ್ರಹ ಸಿಗಲಿ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಅವರು ತುಂಬೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.18ರಂದು ಆದಿತ್ಯವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ವಹಿಸಿದ್ದರು, ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಪರಿವಾರ ದೈವಗಳ ದೇವಸ್ಥಾನ ಮಂಗ್ಲಿಮಾರ್ ಇದರ ಆಡಳಿತ ಮುಕ್ತೇಸರರು ರವಿಶಂಕರ್ ಶೆಟ್ಟಿ ಬಡಾಜೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಭಗವತಿ ಕೋ ಅಪ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್,ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ,ಎ ಸಿ ಎಫ್ ಅರಣ್ಯ ಇಲಾಖೆ ಪಂಜದ ಪ್ರವೀಣ್ ಕುಮಾರ್ ಶೆಟ್ಟಿ, ಮಾಜಿ ತಾಲೂಕು ಪಂ ಸದಸ್ಯ ಅಶೋಕ್

ನೆಕ್ಕರಾಜೆ,ರಾಜ್ಯ ಧಾರ್ಮಿಕ ದತ್ತಿ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ತುಂಬೆ ಗ್ರಾ ಪಂ ಅಧ್ಯಕ್ಷೆ ಜಯಂತಿ ಕೇಶವ್,ನಮ್ಮ ಕುಡ್ಲದ ನಿರ್ದೇಶಕ ಲೀಲಾಕ್ಷ ಕರ್ಕೇರ,ಬೊಂಡಲ ಚಾರಿಟೇಬಲ್ ಟ್ರಸ್ಟ್ ನ ಸಚ್ಚಿದಾನಂದ ಶೆಟ್ಟಿ,ಉದ್ಯಮಿ ಅವಿಲ್ ಮೆನೆಜಸ್,ಉದ್ಯಮಿ ರವಿರಾಜ್ ಸಾಮಾನಿ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಬಿ ಎಚ್ ಖಾದರ್,ಉದ್ಯಮಿ ವಿಜೇಶ್ ನಾಯ್ಕ್ ನಡೀಗುತ್ತು,ಸಂತೋಷ್ ಉಪಸ್ಥಿತರಿದ್ದರು.

ಬ್ರಹ್ಮಕಲಶ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ ಪ್ರಸ್ತವಿಕವಾಗಿ ಮಾತನಾಡಿದರು, ಮಹಿಳಾ ಸಮಿತಿಯ ಉಪಾಧ್ಯಕ್ಷೆ ಸವಿತಾ ಜಗನ್ನಾಥ್ ಶೆಟ್ಟಿ ತುಂಬೆ ಗುತ್ತು ಸ್ವಾಗತಿಸಿ, ವೇದಿಕೆ ಸಮಿತಿ ಸಂಚಾಲಕ ಹಾಗೂ ಸೇವಾ ಸಮಿತಿಯ ಕೋಶಾಧಿಕಾರಿ ಉಮೇಶ್ ಕುಮಾರ್ ರೆಂಜೋಡಿ ಧನ್ಯವಾದವಿತ್ತು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Comment