ನಾವೂರು: ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ‌ಕಾರ್ಡ್ ನೊಂದಾವಣಿ ಕಾರ್ಯಕ್ರಮ.

Coastal Bulletin
ನಾವೂರು: ಉಚಿತ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ‌ಕಾರ್ಡ್ ನೊಂದಾವಣಿ ಕಾರ್ಯಕ್ರಮ.

ಬಂಟ್ವಾಳ :ಸಂಘ ಸಂಸ್ಥೆಗಳು ನಿಸ್ವಾರ್ಥ ಚಿಂತನೆಯಲ್ಲಿ ಸಮಾಜಮುಖಿಯಾಗಿ ಅರ್ಪಣೆಯಾದರೆ ಪುಣ್ಯದ ಫಲ ಎಂದು ಯುವ ಶಕ್ತಿ ಸೇವಾ ಪಥ ದಕ್ಷಿಣ ಕನ್ನಡ ಕಾರ್ಯ ವಿಭಾಗದ ಸದಸ್ಯರಾದ ಗಣೇಶ್ ಕುಲಾಲ್ ಕೆದಿಲ ನುಡಿದರು. ಶ್ರೀ ಮಾತೃಭೂಮಿ ಸೇವಾ ಸಂಘ ‌ನಾವೂರು ಇದರ ಉದ್ಘಾಟನೆಯ ಪ್ರಯುಕ್ತ ಡಿ.10ರಂದು ಆದಿತ್ಯವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವೂರಿನಲ್ಲಿ ಜಸ್ಟೀಸ್ ‌ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಆರೋಗ್ಯ ‌ಕಾರ್ಡ್ ನೊಂದಾವಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟನೆ ನೇರವೇರಿಸಿ ನುಡಿದರು.

ನಾವೂರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಪ್ರಾಥಮಿಕ ಆರೋಗ್ಯ ‌ಕೇಂದ್ರ ನಾವೂರು ಇದರ ಆರೋಗ್ಯಧಿಕಾರಿಯಾದ ಡಾ.ಜೀವನ್, ನಾವೂರು ಪ್ರೌಢ ಶಾಲೆ ಸಹ ಶಿಕ್ಷಕಿ ಶ್ರೀಮತಿ ವಿದ್ಯಾ, 

ಹಿರಿಯ ಪ್ರಾಥಮಿಕ ನಾವೂರಿನ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುನಿತಾ ಭಾಯಿ, ಪ್ರೌಢ ಶಾಲೆಯ ಎಸ್.ಡಿ.ಎಮ್‌.ಸಿ ಯ ಅಧ್ಯಕ್ಷರಾದ ಚೆನ್ನಪ್ಪ ಕಳಮೆ,

ಹಿರಿಯ ಪ್ರಾಥಮಿಕ ಶಾಲೆ ಅಧ್ಯಕ್ಷರಾದ ಸತೀಶ್ ಪದವು  ಅತಿಥಿಯಾಗಿ ಭಾಗವಹಿಸಿದರು.

ದೇರಳಕಟ್ಟೆ ಆಸ್ಪತ್ರೆಯ ಸಮುದಾಯದ ಶಿಬಿರದ ಸಂಯೋಜಕರು ಮನುರಾಜ್ ಶೆಟ್ಟಿ ಹಾಗೂ ಮಾತೃಭೂಮಿ ಸಂಘದ ಅಧ್ಯಕ್ಷರಾದ ಸಂತೋಷ್ ಎಕ್ಕುಡೇಲ್ ಇವರು ಉಪಸ್ಥಿತಿಯಲ್ಲಿದ್ದರು.

ಸಂಘದ ಸಮಗ್ರ ನಿರ್ವಾಹಕ ಸುರೇಶ್. ಎಸ್.ನಾವೂರು ಪ್ರಸ್ತಾಪಿಸಿ ಸ್ವಾಗತಿಸಿ ಧನ್ಯವಾದ ನೀಡಿದವರು. ಕಾರ್ಯದರ್ಶಿಯಾದ ಲೋಹಿತ್ ಕೆ‌.ಕಾರ್ಯ ನಿರೂಪಿಸಿದರು..ಹಲವಾರು ಮಂದಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು

Leave a Comment