ಬಂಟ್ವಾಳ :ಕಳೆದ 27 ವರ್ಷಗಳಂದ ಯಕ್ಷಗಾನ ರಂಗದಲ್ಲಿ ಕಲಾ ಸೆೇವೆ ಮಾಡುತ್ತಿರುವ ಯಕ್ಷಕಲಾ ಪೊಳಲಿ ಇದರ 28ನೆೇ ವರ್ಧಂತ್ಯುತ್ಸವವು ಅ.14ರಂದು ಶನಿವಾರ ಸಂಜೆ 6ರಿಂದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಸಾಹಿತಿ,ಪ್ರಸಂಗ ಕರ್ತ, ಯಕ್ಷಗಾನ ಕಲಾವಿದ, ನಿರೂಪಕ, ಸಂಘಟಕ ಲ.ಕದ್ರಿ ನವನೀತ ಶೆಟ್ಟಿಯವರಿಗೆ "ಪೊಳಲಿ ಯಕ್ಷೋತ್ಸವ ಪ್ರಶಸ್ತಿ -2023" ನೀಡಿ ಗೌರವಿಸಲವಗುವುದು. ಯಕ್ಷಗಾನ ರಂಗದಲ್ಲಿ ಸೆೇವೆ ಸಲ್ಲಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಗಳಾದ ಸುವರ್ಣ ಪ್ರತಿಷ್ಠಾನ ಕರ್ನಿರೆ ಹಾಗೂ ಯಕ್ಷದೆೇವ ಮಿತ್ರ ಕಲಾ ಮಂಡಳಿ ಬೆಳುವಾಯಿ ಈ ಸಂಸ್ಥೆಗಳನ್ನು ಗೌರವಿಸಲವಗುವುದು.
ಯಕ್ಷಗಾನ ರಂಗಕ್ಕೆ ಅನುಪಮ ಸೆೇವೆ ಸಲ್ಲಿಸಿದ ಹಿರಿಯ ಹಾಗೂ ಪ್ರಸಿದ್ಧ ಕಲಾವಿದರಾದ ಡಿ. ಮನೊೇಹರ ಕುಮಾರ್, ಸೀತಾರಾಮ ಕುಮಾರ್ ಕಟೀಲು, ಗುಂಡಿ ಮಜಲು ಗೋಪಾಲ ಕೃಷ್ಣ ಭಟ್ , ವಿಷ್ಣು ಶರ್ಮ ವಾಟೆಪಡ್ಪು, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್,ಸುಬ್ಬಣ್ಣಕೋಡಿ ರಾಮ ಭಟ್
, ಎಂ.ನಾ ಚಂಬಲ್ತಿಮಾರ್,ಮೂರ್ಜೆ ವೆಂಕಟೇಶ ಶೆಟ್ಟಿ ಹಾಗೂ ಡಾ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ ಇವರನ್ನು ಸನ್ಮಾನಿಸಲಾಗುವುದು
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಪ್ರಸಿದ್ಧ 75ಕ್ಕೂ ಮಿಕ್ಕಿ ಯಕ್ಷ ಕಲಾವಿದರಿಂದ ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ನಳಿನಾಕ್ಷನಂದನೆ ಹಾಗೂ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ಅಂಬಾ ಶಪಥ ಎಂಬ ಯಕ್ಷಗಾನ ಬಯಲಾಟ ಸಂಜೆ ಗಂಟೆ 6 ರಿಂದ ಮರುದಿನ ಬೆಳಿಗ್ಗೆ 6 ರವರೆಗೆ ಜರುಗಲಿದೆ ಎಂದು ಸಂಸ್ಥಾಪಕ ಅ ನ ಭ ಪೊಳಲಿ, ಸಂಚಾಲಕ ವೆಂಕಟೇಶ ನಾವಡ ಪೊಳಲಿ, ಸಂಘಟಕ ಬಿ ಜನಾರ್ಧನ ಅಮ್ಮುಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















