ಬಂಟ್ವಾಳ :ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತಿ ಆಚರಣೆ ಪ್ರಯುಕ್ತ ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಕುಮ್ಡೇಲು, ಪುದು ಇದರ ಆಶ್ರಯದಲ್ಲಿ ಸೆ 10ರಂದು ಆದಿತ್ಯವಾರ ಭಜನೆ, ಗುರುಪೂಜೆ, ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ಸಂಘದ ಕಛೇರಿ ಗುರುಸದನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ವೀರ ಹನುಮಾನ್ ಮಂದಿರ ಸುಜೀರು ದತ್ತನಗರ. ದೇವಕಿ ಕೃಷ್ಣ ಭಜನಾ ತಂಡ,ಕುಮ್ಡೇಲು.ನಾರಾಯಣ ಗುರು ಮಹಿಳಾ ವೇದಿಕೆ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.
ಬಂಟ್ವಾಳ ತಾಲೂಕಿನ ಬಿಲ್ಲವ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ (ಗುರುಕೃಪ) ಹಾಗೂ ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಜರಂಗದಳ ಜಿಲ್ಲಾ ಅಧ್ಯಕ್ಷ ಭರತ್ ಕುಮ್ಡೇಲು, ಹಿಂದೂ ಜಾಗರಣ
ವೇದಿಕೆಯ ಯೋಗಿಶ್ ಕೋಟ್ಯಾನ್,ಮಾಜಿ ಜಿ ಪಂ ಸದಸ್ಯೆ ಜಯಶ್ರೀ ಕೆ.ಎ, ಮಾಜಿ ತಾ ಪಂ ಸದಸ್ಯರಾದ ಸೋಮಪ್ಪ ಕೋಟ್ಯಾನ್,ಗಣೇಶ್ ಸುವರ್ಣ ತುಂಬೆ,ಉಮೇಶ್ ಸುವರ್ಣ ತುಂಬೆ,ಶಾಂತ ಡಿ ಚೌಟ,ಭಾಸ್ಕರ ಚೌಟ ಕುಮ್ಡೇಲು, ಸ್ಥಳೀಯ ಪಂಚಾಯತ್ ಸದಸ್ಯರಾದ ವಿಟಲ್ ಸಾಲಿಯಾನ್ ಮತ್ತಿತರರು ಭಾಗವಹಿಸಿ ಗುರುವರ್ಯರ ಆಶೀರ್ವಾದ ಪಡೆದರು.
ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಕಿಶೋರ್ ಸುಜೀರು ಕಾರ್ಯಕ್ರಮವನ್ನು ನಿರೂಪಿಸಿ,ಧನ್ಯವಾದವಿತ್ತರು.















