ಪೊಳಲಿ :ವಿವಿಧ ಸೇವಾ ಸಂಸ್ಥೆಗಳ ಸಹಾಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸ ಶಿಬಿರ.

Coastal Bulletin
ಪೊಳಲಿ :ವಿವಿಧ ಸೇವಾ ಸಂಸ್ಥೆಗಳ ಸಹಾಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸ ಶಿಬಿರ.

ಬಂಟ್ವಾಳ :ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ, ರೋಟರಿ ಕ್ಲಬ್ ಅಫ್ ಬಂಟ್ವಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಎಸ್ಆರ್ ಫ್ರೆಂಡ್ಸ್ ಪೊಳಲಿ, ಅಶ್ವಿನಿ ಆಪ್ಟಿಕಲ್ಸ್ ಬಿ ಸಿ ರೋಡ್ ಇವರ ಸಹಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ ಇದರ ತಜ್ಞ ವೈದ್ಯರಿಂದ ಸಾರ್ವಜನಿಕರಿಗೆ ಉಚಿತ ನೇತ್ರ ಚಿಕಿತ್ಸ ಶಿಬಿರವು ಸರ್ವ ಮಂಗಳ ಕಲ್ಯಾಣ ಮಂಟಪ ಪೊಳಲಿಯಲ್ಲಿ ನಡೆಯಿತು.

ನೇತೃ ತಜ್ಞ ರೋ ಶಾಂತರಾಜ್ , ಡಾ ಅಶ್ವಿನ್ ಸಾಗರ್, ಡಾ ವಿಕಾಸ್ ಹಾಗೂ ಸಹೋದ್ಯೋಗಿಗಳು ನಡೆಸಿಕೊಟ್ಟು ಅರ್ಹರಿಗೆ ಸ್ಥಳದಲ್ಲಿಯೆ ಉಚಿತ ಕನ್ನಡ ವಿತರಿಸಿದರು

ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಮಾತನಾಡಿ ರೋಟರಿ ಸಂಸ್ಥೆಗಳಿಂದ ಉತ್ತಮ ಸಮಾಜಮುಖಿ ಕಾರ್ಯಗಳು

ನಡೆಯುತ್ತಿದ್ದು ಸಾರ್ವಜನಿಕರು ಇದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕೆಂದು ಹೇಳಿದರು. ಸ್ಥಾಪಕ ಅಧ್ಯಕ್ಷರಾದ ಸತೀಶ್ ಕುಮಾರ್, ಮಾಜಿ ತಾಲೂಕ್ ಪಂಚಾಯತ್ ಸದಸ್ಯರು ಹಾಗೂ ಎಸ್ ಆರ್ ಹಿಂದೂ ಫ್ರೆಂಡ್ಸ್ ಇದರ ಅಧ್ಯಕ್ಷರಾದ ವೆಂಕಟೇಶ ನಾವಡ, ಹಾಗೂ ಎಲ್ಲಾ ಸದಸ್ಯರು ಈ ಶಿಬಿರ ಆಯೋಜಿಸುವಲ್ಲಿ ಸಹಕರಿಸಿದರು

Leave a Comment