ಬಂಟ್ವಾಳ : ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇಲ್ಲಿ ಸಕಲ ದೋಷ ಪರಿಹಾರಕ್ಕಾಗಿ ಹಾಗೂ ಶ್ರೀ ವಿಷ್ಣು ದೇವರ ಸಂಪ್ರೀತಿಗಾಗಿ ಸೆ 10ರಿಂದ 16ರ ವರೆಗೆ ಬೆಂಗಳೂರಿನ ವಿದ್ವಾನ್ ಕುತ್ಪಾಡಿ ಶ್ರೀ ಕೃಷ್ಣರಾಜ ಆಚಾರ್ಯರ ಮುಖಂತರ ನಡೆಯುವ ಪರಮ ಪವಿತ್ರವಾದ ಶ್ರೀಮದ್ಭಾಗವತ ಸಪ್ತಾಹಕ್ಕೆ ಸೆ 10ರಂದು ಆದಿತ್ಯವಾರ ಚಾಲನೆ ದೊರೆಯಿತು.
ಬೆಳಿಗ್ಗೆ 9 ಗಂಟೆಗೆ ಬ್ರಹ್ಮರಕೂಟ್ಲು ಬ್ರಹ್ಮಸನ್ನಿದಿಯಿಂದ, ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದವರೆಗೆ ಪರಮ ಪವಿತ್ರ ಶ್ರೀಮದ್ಭಾಗವತ ಗ್ರಂಥವನ್ನು ಭವ್ಯ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ತರಲಾಯಿತು. ನಂತರ ದೇವಸ್ಥಾನದಲ್ಲಿ ಮಹಾಪೂಜೆ ನಡೆದು ಭಾಗವತ
ಪಾರಾಯಣಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್, ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಗವದ್ಭಕ್ತರು ಶ್ರದ್ಧಾ ಭಕ್ತಿಯಿಂದ ದೇವತಾ ಕಾರ್ಯದಲ್ಲಿ ಪಾಲ್ಗೊಂಡರು.















