ಬಿ ಸಿ ರೋಡ್ : ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಯಲ್ಲಿ ಬೆಂಕಿ ಬಳಸದೆ ಅಡುಗೆ ತಯಾರಿ ಸ್ಪರ್ಧೆ.

Coastal Bulletin
ಬಿ ಸಿ ರೋಡ್ : ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಯಲ್ಲಿ ಬೆಂಕಿ ಬಳಸದೆ ಅಡುಗೆ ತಯಾರಿ ಸ್ಪರ್ಧೆ.

ಬಂಟ್ವಾಳ :ಬಿ ಸಿ ರೋಡ್ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾ ಸಂಸ್ಥೆಯಲ್ಲಿ ಪೋಷಕರಿಗೆ ಬೆಂಕಿ ಬಳಸದೆ ಅಡುಗೆ (ಕುಕಿಂಗ್ ವಿಥೌಟ್ ಫೈರ್) ತಯಾರಿ ಮಾಡುವ ಸ್ಪರ್ಧೆ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬಿ ಸಿ ರೋಡ್ ನಲ್ಲಿರುವ ಹೋಟೆಲ್ ಪ್ರಿಯದರ್ಶಿನಿ ಮಾಲಕ ರಾಗಿರುವ ಸಂತೋಷ್ ಕುಮಾರ್ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸ್ವಾತಿ ಶೆಟ್ಟಿ ಮಂಗಳೂರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ತೇಜಸ್ವಿನಿ ಪೂಜಾರಿ ,ಉಪಾಧ್ಯಕ್ಷ ಸುಂದರ್ ಎನ್,

ಕೋಶಾಧ್ಯಕ್ಷ ಜಯಶ್ರೀ, ಆಡಳಿತ ಮಂಡಳಿ ಸದಸ್ಯೆ ಆರತಿ ಅಮೀನ್,ಭಾಗವಹಿಸಿದರು. 

ಸಂಸ್ಥೆಯ ಸಂಚಾಲಕರಾದ ಐತಪ್ಪ ಪೂಜಾರಿ ಯವರು ಸ್ವಾಗತಿಸಿ.ಶಿಕ್ಷಕಿಯಾದ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.ಸ್ಪರ್ಧೆಯ ನಿರ್ಣಾಯಕರಾಗಿ ಸ್ವಾತಿ ಶೆಟ್ಟಿ ಮಂಗಳೂರು , ಶಿಕ್ಷಕಿಯರಾದ ಚೈತ್ರ, ಪುಷ್ಪಲತಾ,ಗೀತಾ, ರಂಜಿನಿ, ದಿವ್ಯಾ ಸಹಕರಿಸಿದರು. ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು

Leave a Comment