ಬಂಟ್ವಾಳ: ಸಿವಿಲ್ ಗುತ್ತಿಗೆದಾರರ ಸಂಘ ಬಂಟ್ವಾಳ ತಾಲೂಕು ಘಟಕದ 2022-2023 ನೇ ಸಾಲಿನ ನೂತನ ಅಧ್ಯಕ್ಷ ನಾಗೇಶ್ ಕುಲಾಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಬಂಟ್ವಾಳದ ಪ್ರವಾಸಿಮಂದಿರದಲ್ಲಿ ನಡೆಯಿತು.
ಹಿರಿಯ ಗುತ್ತಿಗೆದಾರರಾದ ಮಹಾಬಲ ಶೆಟ್ಟಿ ಪಲ್ಲಮಜಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್ ಪುತ್ತೂರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ಸಂಘವನ್ನು ಇನ್ನಷ್ಟು ಸಂಘಟನಾತ್ಮಕವಾಗಿ ಬೆಳೆಸುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಬ್ರಾಹಿಂ ಕುಕ್ಕಾಜೆ ವಹಿಸಿದ್ದರು.
ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ರಾಜಣ್ಣ,ಪಿಡಬ್ಲ್ಯೂಡಿ ಎ.ಇ.ಇ. ಷಣ್ಮುಗಂ, ಆರ್.ಡಬ್ಲ್ಯೂ.ಡಿ.ಎಸ್ ಪಿ.ಆರ್.ಇ.ಡಿ ಇಂಜಿನಿಯರ್ ಗಳಾದ ಕೃಷ್ಣ ಮಾದಪ್ಪ, ಜಗದೀಶ ನಿಂಬಾಲ್ಕರ್, ಅಜಿತ್ ಕುಮಾರ್, ಕುಶ ಕುಮಾರ್, ನಾಗೇಶ್,
ರವಿಕುಮಾರ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳಾದ ಅರುಣ್ ಪ್ರಕಾಶ, ಅಮೃತ್ ಕುಮಾರ್,
ಜಿಲ್ಲಾ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಕೆ. ನಾಸಿರ ಕೊಣಾಜೆ, ಹಿರಿಯ ಗುತ್ತಿಗೆದಾರರಾದ ಅಮ್ಮು ರೈ, ವಳಚ್ಚಿಲ್ ಖಾದರ್ ಅತಿಥಿಗಳಾಗಿ ಭಾಗವಹಿಸಿದ್ದರು.
ಉಪಸ್ಥಿತರಿದ್ದರು. ನೂತನ ಅಧ್ಯಕ್ಷರಾದ ನಾಗೇಶ್ ಕುಲಾಲ್ ನರಿಕೊಂಬು , ಕೋಶಾಧಿಕಾರಿ ಚಿತ್ತರಂಜನ್, ಕಾರ್ಯದರ್ಶಿ ಶಮೀರ್ ಫಜೀರು ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷ ಎಸ್.ನಾರಾಯಣ ಸ್ವಾಗತಿಸಿ, ಪ್ರಸ್ತಾಪಿಸಿದರು. ಬಾಲಕೃಷ್ಣ ಸೆರ್ಕಳ ಕಾರ್ಯಕ್ರಮ ನಿರೂಪಿಸಿದರು. ಶೈಲೇಶ್ ಪೂಜಾರಿ ವಂದಿಸಿದರು.














