ನೆತ್ತರಕೆರೆ : ತುಳುನಾಡಿನ ಹಿಂದಿನ ಆಹಾರಪದ್ಧತಿ ಆರೋಗ್ಯವರ್ಧಕ: ಮನೋಜಿತ್ ಕೆ.ವಿ.

Coastal Bulletin
ನೆತ್ತರಕೆರೆ : ತುಳುನಾಡಿನ ಹಿಂದಿನ ಆಹಾರಪದ್ಧತಿ ಆರೋಗ್ಯವರ್ಧಕ: ಮನೋಜಿತ್ ಕೆ.ವಿ.

ಬಂಟ್ವಾಳ: ತುಳುನಾಡಿನ ಖಾದ್ಯಗಳು ಆರೋಗ್ಯವರ್ಧಕವಾಗಿ ಕಾರ್ಯನಿರ್ವಹಿಸುತ್ತಿದ್ದವು. ಕಾಲಕಾಲಕ್ಕೆ ಅನುಗುಣವಾಗಿ ರೂಢಿಸಿಕೊಂಡಿರುವ ಆಹಾರ ಪದ್ಧತಿ ಶರೀರದ ಏರುಪೇರುಗಳನ್ನು ಸರಿಪಡಿಸುತ್ತಿದ್ದವು. ಹೀಗಾಗಿ ನಮ್ಮ ಪೂರ್ವಜರು ಆರೋಗ್ಯವಂತರಾಗಿ ದೀರ್ಘಕಾಲ ಬಾಳುತ್ತಿದ್ದರು. ಈಗಿನ ಆಹಾರ ಪದ್ಧತಿ ಅದಕ್ಕೆ ವಿರುದ್ಧವಾಗಿದ್ದು, ಕ್ಯಾನ್ಸರ್‌ನಂತಹ ಮಾರಕ ಖಾಯಿಲೆಗಳು ಸಾಮಾನ್ಯವಾಗಿ ಹೆಚ್ಚಿನವರಲ್ಲಿ ಕಂಡುಬರುತ್ತಿವೆ ಎಂದು ನ್ಯೂರೋಥೆರಪಿ ತಜ್ಞ ಮನೋಜಿತ್ ಕೆ.ವಿ. ಖೇದ ವ್ಯಕ್ತಪಡಿಸಿದರು.

ಅವರು ನೇತ್ರಾವತಿ ಮಾತೃಮಂಡಳಿ ನೆತ್ತರಕೆರೆ ಕಳ್ಳಿಗೆ ವತಿಯಿಂದಆ 10ರಂದು ಭಾನುವಾರ ನೆತ್ತರಕೆರೆ ಸರ್ಕಾರಿ ಶಾಲೆಯ ದಿ.ವಿಠ್ಠಲ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ ನೆರವೇರಿದ ಆಟಿಡೊಂಜಿ ಗಮ್ಮತ್ತ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದರು.

ಬೆಳಿಗ್ಗೆಯಿಂದ ಕಾರ್ಯಕ್ರಮ ಉದ್ಘಾಟನೆಗೊಂಡು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸೇಸಮ್ಮಜ್ಜಿಯ ಪಾಡ್ದನ, ತುಳುಜನಪದ ಗೀತೆ, ತುಳುಭಾಷೆಯಲ್ಲಿ ವಿದ್ಯಾರ್ಥಿಗಳಿಂದ ನಿರೂಪಣೆ ಕಾರ್ಯಕ್ರಮಕ್ಕೆ ಮೆರುಗುನೀಡಿತ್ತು. ಮಾತೃಮಂಡಳಿ ಸದಸ್ಯರು ಮನೆಯಲ್ಲೇ ತಯಾರಿಸಿ ತಂದ ತುಳುನಾಡಿನ ವಿಭಿನ್ನ ಖಾದ್ಯಗಳೊಂದಿಗೆ ಮಧ್ಯಾಹ್ನ ಮಾತೃಭೋಜನ ಅದ್ಧೂರಿಯಾಗಿ ನಡೆಯಿತು.

ಮಾತೃಮಂಡಳಿ ಪದಾಧಿಕಾರಿಗಳಾದ ಲಲಿತಾ ಸುಂದರ್ ನೆತ್ತರಕೆರೆ, ಸುಶೀಲಾ ಶೇಖರ್, ಪ್ರಮುಖರಾದ ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ಪ್ರಕಾಶ್ಚಂದ್ರ ರೈ ದೇವಸ್ಯ, ಉಮೇಶ್ ಸಾಲ್ಯಾನ್ ಬೆಂಜನಪದವು, ಚೆನ್ನಪ್ಪ ಕೋಟ್ಯಾನ್, ಪದ್ಮನಾಭ ಶೆಟ್ಟಿ ಕೊಟ್ಟಿಂಜ, ಸತೀಶ್ ನಾಯ್ಗ ಕೊಡ್ಮಾಣ್, ವಿನೋದ್ ಕೊಡ್ಮಾಣ್, ಗ್ರಾಮ ವಿಕಾಸ ಮಂಗಳೂರು ವಿಭಾಗ ಸಂಯೋಜಕ ಜಿತೇಂದ್ರ, ಗಿರೀಶ್ ಶೆಟ್ಟಿ

ಕುಂಪಣಮಜಲು, ದೇವದಾಸ್ ಶೆಟ್ಟಿ ಕೊಡ್ಮಾಣ್, ಅನಿಲ್‌ಪಂಡಿತ್ ವಳವೂರು, ನವೋದಯ ಮಿತ್ರಕಲಾ ವೃಂದದ ಸಂಚಾಲಕ ದಾಮೋದರ ನೆತ್ತರಕೆರೆ,ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್, ಅಧ್ಯಕ್ಷ ಜಗದೀಶ್ ಎನ್, ಉಪಾಧ್ಯಕ್ಷ ಸಂತೋಷ್ ಕುಲಾಲ್ ನೆತ್ತರಕೆರೆ,ಕಾರ್ಯದರ್ಶಿ ಮಹೇಶ್ ಎನ್, ಗೋಪಾಲ ಗೋವಿಂದೋಟ, , ಬಿ. ಸುರೇಶ್ ಭಂಡಾರಿ ಅರ್ಬಿ, ದಿವಾಕರ ಶೆಟ್ಟಿ ಕುಪ್ಪಿಲ, ಸತೀಶ್ ಶೆಟ್ಟಿ ಮೊಡಂಕಾಪುಗುತ್ತು, ರಮಾನಂದ ಶೆಟ್ಟಿ ಬೆಂಜನಪದವು, ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಉಪಾಧ್ಯಕ್ಷೆ ವಾರಿಜ ರಮೇಶ್ ಚಂದ್ರಿಗೆ, ಮನೋಹರ ಕಂಜತ್ತೂರು, ., ಸಂತೋಷ್ ಎನ್., ಶೈಲಜಾ ಪಿ. ಶೆಟ್ಟಿ, ಪ್ರತಿಭಾ ಪಿ ಶೆಟ್ಟಿ, ದೇವಿಪ್ರಸಾದ್ ಎಂ ದೇವಂದಬೆಟ್ಟು, ಸುಧೀರ್ ಜಾರಂದಗುಡ್ಡೆ, ಚೇತನ್ ಮುಂಡಾಜೆ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಜಗದೀಶ್ ಬಂಗೇರ, ಭಾಸ್ಕರ್ ಕುಲಾಲ್, ಚಂದ್ರಹಾಸ ಎನ್, ವಿಶ್ವನಾಥ ಕುಲಾಲ್, ಸದಾನಂದ ಮತ್ತಿತರರು ಉಪಸ್ಥಿತರಿದ್ದರು. ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಸಿಂಧೂ ಸ್ವಾಗತಿಸಿದರು. ಶ್ರಾವ್ಯ ವಂದಿಸಿದರು.

Leave a Comment