ಬಿ.ಸಿ.ರೋಡು: ಬೊಲ್ಪು ರೈತ ಉತ್ಪಾದಕ ಕಂಪೆನಿ ವಾರ್ಷಿಕ ಮಹಾಸಭೆ

Coastal Bulletin
ಬಿ.ಸಿ.ರೋಡು: ಬೊಲ್ಪು ರೈತ ಉತ್ಪಾದಕ ಕಂಪೆನಿ ವಾರ್ಷಿಕ ಮಹಾಸಭೆ

ಬಂಟ್ವಾಳ: ರೈತ ಉತ್ಪನ್ನಗಳ ಖರೀದಿ ಮತ್ತು ಮೌಲ್ಯವರ್ಧನೆ ಜೊತೆಗೆ ಅದಕ್ಕೆ ಮಾರುಕಟ್ಟೆ ಒದಗಿಸುವ ಉದ್ದೇಶದೊಂದಿಗೆ ಬೊಲ್ಪು ರೈತ ಉತ್ಪಾದಕ ಕಂಪೆನಿ ಇಲ್ಲಿನ ಕೃಷಿ ಇಲಾಖೆಯಡಿ ನೋಂದಾಯಿತ ಪ್ರಥಮ ಸಂಸ್ಥೆ ಎಂದು ಸಂಸ್ಥೆಯ ಅಧ್ಯಕ್ಷ ರಾಜಾ ಬಂಟ್ವಾಳ್ ಹೇಳಿದರು. ಇಲ್ಲಿನ ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂಸ್ಥೆಯ ವಾಷರ್ಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯಮಿ ಸದಾನಂದ ಶೆಟ್ಟಿ ರಂಗೋಲಿ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಯಮಿ ಅವರ್ಿನ್ ಡಿ'ಸೋಜಾ ಲೊರೆಟ್ಟೊ, ಜಗದೀಶ ಭಂಡಾರಿ ಕುರಿಯಾಳ, ಸೀತಾರಾಮ ಶೆಟ್ಟಿ ಸಜಿಪ ಮತ್ತಿತರರು ಇದ್ದರು. ಇದೇ ವೇಳೆ  

ರೈತರಿಗೆ ಷೇರು ಪತ್ರ ವಿತರಣೆ, ಹಲಸಿನ ಗಿಡಗಳ ಪ್ರದರ್ಶನ, ವಿವಿಧ

ಉತ್ಪನ್ನಗಳ ಮಾರಾಟ ನಡೆಯಿತು. 

ಸಿಇಒ ಲೋಹಿತ್ ಎನ್. ವರದಿ ವಾಚಿಸಿದರು. ನಿದರ್ೇಶಕ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿ, ವಿಜಯ ರೈ ಆಲದಪದವು ವಂದಿಸಿದರು. ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರೂಪಿಸಿದರು.  


Leave a Comment