ಬಂಟ್ವಾಳ :ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ತುರ್ತು ಸಂದರ್ಭದಲ್ಲಿ ಸಹಕರಿಸಿದ ಸೇವಾ ಭಾರತಿ ತಂಡಕ್ಕೆ ಶುಕ್ರವಾರ ಅಭಿನಂದಿಸಲಾಯಿತು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿದ ಇಲ್ಲಿನ ಸೇವಾಭಾರತಿ ತಂಡಕ್ಕೆ ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಅಭಿನಂದಿಸಲಾಯಿತು. ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ ಮಾತನಾಡಿ, ಸೇವಾಭಾರತಿ ತಂಡವು ಕೋವಿಡ್
ಸೋಂಕಿತರ ಸಾಗಾಟ ಮತ್ತು ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟೋಪಚಾರ ಪೂರೈಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಮುಖರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ವಿನೋದ್ ಕೊಡ್ಮಾಣ್, ನರಸಿಂಹ ಮಾಣಿ, ಚಂದ್ರಕಲಾಯಿ, ಸುರೇಶ್ ಬೆಂಜನಪದವು ಮತ್ತಿತರರು ಇದ್ದರು.















