ಬಂಟ್ವಾಳ :ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರ ಮಾರುತಿ ಶಾಖೆ ಶ್ರೀರಾಮ ನಗರ ಬೆಂಜನಪದವು ಇದರ ಆಶ್ರಯದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಪ್ರಯುಕ್ತ "ಹಿಂದೂ ಸಾಮ್ರಾಜ್ಯ ದಿನ" ಆಚರಣೆಯು ಜೂನ್ 12ರಂದು ಆದಿತ್ಯವಾರ ಸಂಜೆ 5ಕ್ಕೆಬೆಂಜನಪದವಿನ ಶ್ರೀರಾಮ ನಗರದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಯು ಲೋಕಾರ್ಪಣೆಗೊಳ್ಳಲಿದೆ ಹಾಗೂ ಶ್ರೀಮತಿ ಜಯರಾಮ ಶೆಟ್ಟಿ ಸ್ಮರಣಾರ್ಥ ನಿರ್ಮಿಸಿದ ಜೈ ಶಿವಾಜಿ ಪ್ರಯಾಣಿಕರ ತಂಗುದಾಣ ಉದ್ಘಾಟನೆಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಬಂಟ್ವಾಳದ
ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ವಿ ಹಿಂ ಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಸಹಿತ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
















