Coastal Bulletin

ಮಂಗಳೂರಿನ ಉರ್ವಸ್ಟೋರಿನಲ್ಲಿರುವ ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಥಮ ವಾರ್ಷಿಕ ವಿಶೇಷ ಶಿಬಿರ “ಸ್ವಸ್ತಿಕ ಹಳ್ಳಿಹಬ್ಬ”ವು ನೆತ್ರೆಕೆರೆ ಸಮೀಪದ ಹೊಳ್ಳರಬೈಲಿನಲ್ಲಿ ಮೇ 8ರಂದು ಆದಿತ್ಯವಾರ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಮಾರ ಚಂದ್ರ (ಅಡಿಷನಲ್ ಎಸ್ಪಿ, ದಕ್ಷಿಣ ಕನ್ನಡ, ಜಿಲ್ಲೆ), ಎನ್ನೆಸಸ್ನ ಉದ್ದೇಶ ಮತ್ತು ಧ್ಯೇಯವನ್ನು ವಿವರಿಸುತ್ತಾ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮೂಡಿಸಲು ಇಂತಹ ಶಿಬಿರ ಮುಖ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಬಂಟ್ವಾಳ ಶಾಸಕರಾದ ಯು. ರಾಜೇಶ್ ನಾಯಕ್, ಪ್ರಸ್ತುತ ಸನ್ನಿವೇಶದಲ್ಲಿ ಗ್ರಾಮೀಣ ಜೀವನ ಬಹಳ ಮುಖ್ಯ ಪಾತ್ರ ವಹಿಸಿದೆ. ಲಾಕ್ಡೌನ್ ಸಮಯದಲ್ಲಿ ನಗರ ವಾಸಿಗಳು ಅನುಭವಿಸಿದ ಕಷ್ಟ ಹಾಗೂ ಗ್ರಾಮೀಣ ವಾಸಿಗಳ ಜೀವನದ ಅನುಭವವನ್ನು ವಿವರಿಸಿದರು.

ಇನ್ನೊರ್ವ ಮುಖ್ಯ ಅತಿಥಿಗಳ ರಮೇಶ್ ಉಪಾಧ್ಯಾಯ ಮಾತನಾಡುತ್ತ,ಕಾಲೇಜಿನ ಪಠ್ಯ

ಬರೇ ಉದ್ಯೋಗಕ್ಕೆ ಮಾತ್ರ ಸೀಮಿತ. ಆದರೆ ಜೀವನದಲ್ಲಿ ಶಿಸ್ತು, ಸಂಯಮ, ವಿಧೇಯತೆ ಮೂಡಿಸಲು ಎನ್ನೆಸಸ್ ನಂತಹ ಶಿಬಿರದಲ್ಲಿ ಪಾಲ್ಗೊಳ್ಳುವುದೂ ಮುಖ್ಯ ಎಂದು ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ಹಂಚಿಕೊಂಡರು.

ವೇದಿಕೆಯಲ್ಲಿ ನಾರಾಯಣ ಹೊಳ್ಳ ತಿರುಳೇಶ್ ಬೆಳ್ಳೂರ್.ಡಾ| ರಾಘವೇಂದ್ರ ಹೊಳ್ಳ ಡಾ| ಮಾಲಿನಿ ಹೆಬ್ಬಾರ್, ಜಗದೀಶ ಬಂಗೇರ ಉಪಸ್ಥಿತರಿದ್ದರು.

ಶಿಬಿರಾಧಿಕಾರಿ ವಿದ್ಯಾಲಕ್ಷ್ಮಿ ಪಿ. ಶೆಟ್ಟಿ ಸ್ವಾಗತಿಸಿ, ವಿದ್ಯಾರ್ಥಿ ನಾಯಕಿ ಕು. ಸುಶ್ಮಿತಾ ವಂದಿಸಿದರು. ಅಧ್ಯಾಪಕಿ ಕು. ದೀಕ್ಷಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಶಿಕ್ಷಕ ವೃಂದ, ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಿಂದ “ಭಸ್ಮಾಸುರ ಮೋಹಿನಿ”ಎಂಬ ಯಕ್ಷಗಾನ ನಡೆಯಿತು.

Leave a Comment