Coastal Bulletin

ಬಂಟ್ವಾಳ: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ "ಜೇಸಿಐ ಬಿ.ಸಿ.ರೋಡ್ ಪವರ್ ಸ್ಟಾರ್" ವತಿಯಿಂದ ಮಹಿಳಾ ಸಾಧಕಿಯರಿಬ್ಬರನ್ನು ಸನ್ಮಾನಿಸಿ ಅಭಿನಂದಿಸಲಾಯಿತು

ಗಾಂದೋಡಿನ ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ವರುಷದಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಂಸ್ಕೃತಿಕ ಸಂಘಟಕಿ, ಸಮಾಜಿಕ‌ ಕಾರ್ಯಕರ್ತೆ ಸರೋಜಾ ಪ್ರಕಾಶ್ ಹಾಗೂ ಹೋಮಿಯೋಪತಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ 4 ನೇ ಶ್ರೇಣಿ ಪಡೆದು ತೇರ್ಗಡೆ ಹೊಂದಿರುವ ಸಾಧಕಿ ಕುಮಾರಿ ಡಾ. ಪ್ರಣಮ್ಯ ಜೈನ್ ರಾಯಿ ಅವರನ್ನು‌ ಸನ್ಮಾನಿಸಿ‌ ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಸುಬ್ರಹ್ಮಣ್ಯ ಕಾಡುಮಠ ವಹಿಸಿದ್ದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಸದಾಶಿವ ಬಂಗೇರ, ಹೇಮಚಂದ್ರ ಶೆಟ್ಟಿಗಾರ್, ಜಗದೀಶ್ ಕೊಯಿಲ,ಜೇಸಿ

ರಾಘವೇಂದ್ರ ರಾಯಿ, ಜೇಸಿ ಸತೀಶ್ ಕೊಯಿಲ , ಜೇಸಿ ರೀಟಾ ಮಾರಿಯಾ ಮೆನೇಜಸ್ ಉಪಸ್ಥಿತರಿದ್ದರು.

ಸರೋಜಾ ಪ್ರಕಾಶ್ ಅವರನ್ನು ಅಂಗನವಾಡಿ ಕೇಂದ್ರದಲ್ಲಿ ಹಾಗೂ ಡಾ. ಪ್ರಣಮ್ಯ ಜೈನ್ ರಾಯಿ ಅವರನ್ನು‌ ಅವರ ಸ್ವಗ್ರಹದಲ್ಲಿ ಅಭಿನಂದಿಸಲಾಯಿತು. ಭವಾನಿ ಶೆಟ್ಟಿ , ಜೇಸಿ ಸುಭಾಶ್ ರೈ, ಜೇಸಿ ಸತೀಶ್ ಸಂಪಾಜೆ, ಜೇಸಿ ಮಹೇಶ್ ಶೆಟ್ಟಿ, ಜೇಸಿ ವಿದ್ಯಾ ಎಸ್ ರೈ ಉಪಸ್ಥಿತರಿದ್ದರು. ಆಶಾ ದಿನೇಶ್ ಶೆಟ್ಟಿ ಹಾಗೂ ಜೇಸಿ ಮರೀಟಾ ಕ್ರಿಸ್ಟಿನ್ ಡಿಸೋಜಾ ಸನ್ಮಾನಿತರ ಪರಿಚಯಿಸಿದರು. ಜೇಸಿ ಸುದೀರ್ ಕುಮಾರ್ ಶೆಟ್ಟಿ ವಂದಿಸಿದರು.

Leave a Comment