ಶ್ರೀ ರಕ್ತೇಶ್ವರೀ ಯುವಕ ಸಂಘ (ರಿ) ನೇರಂಬೇೂಳು.ಇದರ 21ನೇ ವರ್ಷದ ವಾರ್ಷಿಕೇೂತ್ಸವವು ಇತ್ತೀಚೆಗೆ ಬಂಟ್ವಾಳದ ನೇರಂಬೇೂಳಿನ ಶ್ರೀ ರಕ್ತೇಶ್ವರೀ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು
ಸಭಾ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಪುರಸಭಾ ಸದಸ್ಯೆ ಮೀನಾಕ್ಷಿ .ಜೆ.ಗೌಡ. ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೇಬಿ ಕುಂದರ್ ,ಬಿ.ಜೆ.ಪಿ. ಬಂಟ್ವಾಳ ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಗತಿಪರ ಕೃಷಿಕ ದೇವಪ್ಪ ಕುಲಾಲ್ ಪಂಜಿಕಲ್ಲು, ಮೋಹನ್ ಗೌಡ ಕಲ್ಮಂಜ ಅದ್ಯಕ್ಷರು ದ.ಕ ಜಿಲ್ಲಾ ಕಿಸಾನ್ ಕಾಂಗ್ರೆಸ್,ಜಗತ್ ಇಲೆಕ್ಟರಿಕಲ್ಸ್ ನ ಮಾಲಕ ಜಗದೀಶ್ ಪೂಜಾರಿ, ಶ್ರೀ ಕ್ಷೇತ್ರ ಕಾರಂಬಡೆಯ ಆಡಳಿತ ಮುಖ್ಯಸ್ಥರಾದ ಅರುಣ್ ಕುಮಾರ್ ಕಾರಂಬಡೆ, ರಕ್ತೇಶ್ವರಿ ಯುವಕ ಸಂಘದ ಅಧ್ಯಕ್ಷರಾದ ಗೋಪಾಲ
ಪೂಜಾರಿ ಹಾಗು ಗೌರವ ಅಧ್ಯಕ್ಷರಾದ ಚಂದ್ರಹಾಸ ಟೈಲರ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಕು.ಓಡ್ರಿನ್ ಡಿ'ಸೋಜ, ನಿವೃತ್ತ ಸೈನಿಕ ಡಿಕೇಶ್ ಕೋಟ್ಯಾನ್ ಬ್ರಹ್ಮರಕೊಟ್ಲು,ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ,ಕಲಾವಿದ ಹೆಚ್.ಕೆ.ನಯನಾಡು, ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು
ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಲಾಲ್ ಕಾರ್ಯಕ್ರಮ ನಿರೂಪಿಸಿ.ಯೇೂಗಿಶ್ ಗೌಡ ಸ್ವಾಗತಿಸಿ.ಮಂಜುನಾಥ ಕುಲಾಲ್ ವರದಿ ವಾಚಿಸಿ ನವೀನ್ ಪೂಜಾರಿ ಧನ್ಯವಾದವಿತ್ತರು.
ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.














